Featured Post

Mathematics keyanswer Karnataka 2nd puc mathematics keyanswer 2024

ಇಮೇಜ್
Mathematics keyanswer Karnataka 2nd puc mathematics keyanswer 2024 Video section  click to watch

ಗೂಗಲ್ ಪ್ಲೇ ಸ್ಟೋರ್ ನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ಮುಂಚೆ.. ಸೈಬರ್ ಕಳ್ಳರಿಂದ ಬ್ಯಾಂಕ್ ಗೆ 30, 000 ರೂಪಾಯಿ ಕನ್ನ. ಹುಷಾರ್ !

 ಗೂಗಲ್ ಪ್ಲೇ ಸ್ಟೋರ್ ನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ಮುಂಚೆ..  ಸೈಬರ್ ಕಳ್ಳರಿಂದ ಬ್ಯಾಂಕ್ ಗೆ 30, 000 ರೂಪಾಯಿ ಕನ್ನ.  ಹುಷಾರ್ !


ಇವತ್ತಿನ ಆಧುನಿಕ ಜಗತ್ತಿನಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಹೆಚ್ಚಾಗಿದ್ದು ಅದೇ ರೀತಿ ಅಪ್ಲಿಕೇಶನ್ಗಳ ಅಭಿವೃದ್ಧಿ ಸಹ ಹೆಚ್ಚಾಗುತ್ತಾ ಇದೆ ಹಾಗೂ ಹೊಸ ಅಪ್ಪ್ಲಿಕೇಷನ ಬಳಸುವವರ ಸಂಖ್ಯೆ ಸಹ ಹೆಚ್ಚಾಗುತ್ತಾ ಇದೆ..

 ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸರ್ಚ್ ಮಾಡುವಾಗ ಬಹಳಷ್ಟು ಅಪ್ಲಿಕೇಶನ್ಗಳು ನಮ್ಮ ಕಣ್ಣಿಗೆ ಬೀಳುತ್ತವೆ,  ನೋಡೋಣ ಅಂತ ಹೇಳಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವುದಾಗಲೀ ಅಥವಾ ಯಾರೋ ಗೆಳೆಯರು ಹೇಳಿದ್ದಾರೆ ಅಂತ ನಿಮಗೆ ಮಾಹಿತಿ ಗೊತ್ತಿಲದ ಅಪ್ಲಿಕೇಶನ್ ಡೌನ್ಲೋಡ್  ಮಾಡಿಕೊಳ್ಳೋದು ಆಗಲಿ  ಅಥವಾ ಅಪರಿಚಿತರು ಹೇಳಿರುವಂತಹ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ಮುನ್ನ ಎಚ್ಚರವಹಿಸಿ ಏಕೆಂದರೆ ಇತ್ತೀಚೆಗೆ ನಡೆದ ಒಂದು ಘಟನೆ,   ಇಲ್ಲೊಬ್ಬ ಸೈಬರ್ ಕಳ್ಳ ಅಮಾಯಕ ವ್ಯಕ್ತಿಯ ಮೊಬೈಲ್ಗೆ ಕ್ವಿಕ್ ಸಪೋರ್ಟ್ ಇನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಸಿ ಬ್ಯಾಂಕ್ ಖಾತೆಯಿಂದ 30, 000 ರೂಪಾಯಿ ಕನ್ನ ಹಾಕಿದ್ದಾನೆ. 

                             ಜಾಹಿರಾತು 
🌷🌷ಪ್ರೀತಿಯಲ್ಲಿ ನಂಬಿ ಮೋಸ ,ವಿದ್ಯಾಭ್ಯಾಸ ತೊಂದರೆ ,ಆರೋಗ್ಯ ಅಭಿವೃದ್ಧಿ, ಪ್ರೀತಿಯಲ್ಲಿ ಬಿದ್ದ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಹಣಕಾಸಿನ ಸಮಸ್ಯೆ, ವ್ಯಾಪಾರ ಅಭಿವೃದ್ಧಿ ,ಕೊಟ್ಟ ಹಣ ಮರಳಿ ಬರಲು, ಗಂಡ ಹೆಂಡತಿ ಸಮಸ್ಯೆ ,ಇನ್ನೂ ನಿಮ್ಮ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು ತಕ್ಷಣ ಕರೆಮಾಡಿ +91 99011 38195 🙏


  ಬೆಂಗಳೂರಿನ ನಿವಾಸಿ ಮಹೇಂದ್ರ ಎನ್ನುವವರ ಮಗ ಮೊಬೈಲ್ ಉಪಯೋಗಿಸುವಾಗ ಒಬ್ಬ ಅಪರಿಚಿತ ವ್ಯಕ್ತಿ ಗೇಮ್ ಗಳನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಕ್ವಿಕ್ ಸಪೋರ್ಟ್ ಇನ್ ಅಪ್ಲಿಕೇಶನನ್ನು ಡೌನ್ಲೋಡ್ ಮಾಡಿಕೊಳ್ಳಿ ಅಂತ ಹೇಳುತ್ತಾನೆ ಅದರಂತೆ ಮಹೇಶ್ ಎಂಬ ಹುಡುಗ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಅದಕ್ಕೆ ತಮ್ಮ ಬ್ಯಾಂಕ್ ಡೀಟೇಲ್ಸ್ ಅನ್ನು ಎಂಟ್ರಿ ಮಾಡಿ ಸಬಿಟ್ ಮಾಡ್ತಾನೆ. 

ನಂತರ ದಿನೇ 6000 ರೂಪಾಯಿ ಎಂಬಂತೆ ತಮ್ಮ ಬ್ಯಾಂಕ್ನಿಂದ 30000 ರೂಪಾಯಿ ಕಡಿತವಾಗಿದೆ,  ಬ್ಯಾಂಕ್ ಖಾತೆಯಿಂದ ದುಡ್ಡು ಕಡಿತವಾಗುವ ಹಿನ್ನೆಲೆಯಲ್ಲಿ ಗೂಗಲ್ ಸರ್ಚ್ನಲ್ಲಿ ಗೂಗಲ್ ಹೆಲ್ಪ್ ಲೈನ್ ಗೆ  ಕಾಲ್ ಮಾಡಿ ಕೇಳಿದಾಗ ಈ ಸತ್ಯ ಬಹಿರಂಗವಾಗುತ್ತದೆ ಏಕೆಂದರೆ ಅಪರಿಚಿತ ವ್ಯಕ್ತಿ ಹೇಳಿರುವ ಕ್ವಿಕ್ ಸಪೋರ್ಟ್ ಅಪ್ಲಿಕೇಶನ್ ಬ್ಯಾಂಕ್ ಖಾತೆಯನ್ನು  ಹಾಗೂ ರಿಜಿಸ್ಟರ್ ಮಾಡಿರುವ  ಮೊಬೈಲ್ ನಂಬರ್ ಸೈಬರ್ ಕಳ್ಳರ ಕೈಗೆ ಸಿಗುತ್ತೆ ನಂತರ ಅವರು ರೆಮೋತಿನಂತೆ  ಅದನ್ನು ಉಪಯೋಗಿಸಿಕೊಂಡು ನಿಮಗೆ ಗೊತ್ತಿಲ್ಲದೇ  ಸುಲಭವಾಗಿ ದುಡ್ಡನ್ನು ಬ್ಯಾಂಕ್ ಖಾತೆಯಿಂದ ದುಡ್ಡನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ. 

  ಈ ವಿಷಯದ ಬಗ್ಗೆ ಸಮೀಪವಿರುವ ಅಂತಹ ಠಾಣೆಯಲ್ಲಿ ದೂರು ದಾಖಲಿಸಿದ್ದು ಇದರ ಮೇಲೆ ತನಿಖೆ ನಡೆಯುತ್ತಿದೆ. 

  ದಯವಿಟ್ಟು ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವ ಮುಂಚೆ ಅಪ್ಲಿಕೇಶನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ. ಯಾರೋ  ಗೆಳೆಯರು ಹೇಳಿದ್ದಾರೆ ಅಂತ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳುವುದು ಆಗಲಿ ಅಥವಾ ಅಪ್ಲಿಕೇಶನ್ಗಳನ್ನು ಟೆಸ್ಟ್  ಮಾಡೋಣ ಅಂತ ಹೇಳಿ ಡೌನ್ಲೋಡ್ ಮಾಡಿಕೊಳ್ಳುವುದಾಗಲೀ ದಯವಿಟ್ಟು ಮಾಡಬೇಡಿ ಇದರಿಂದ ಸಂಪೂರ್ಣವಾಗಿ ನಿಮ್ಮ ಮೊಬೈಲ್ನಲ್ಲಿ ಇರುವ ಎಲ್ಲಾ ಮಾಹಿತಿ ಸೈಬರ್ ಕಳ್ಳರ ಕೈಗೆ ಸಿಗುತ್ತೆ ಹಾಗೂ ದುರುಪಯೋಗ   ಮಾಡಿಕೊಳ್ಳುತ್ತಾರೆ. 

ನಿಮ್ಮ ಮೊಬೈಲನ್ನು ರಿಮೋಟ್  ಅಂತೆ ಉಪಯೋಗ ಮಾಡಿಕೊಂಡು ಮೊಬೈಲ್ ಗೆ ಲಿಂಕ್ ಆಗಿರುವಂತಹ ಪಾಸ್ವರ್ಡ್ ಅಥವಾ ಬ್ಯಾಂಕ್ ಖಾತೆಗಳ ಮೂಲಕ ನಿಮ್ಮ ಎಲ್ಲಾ ದುಡ್ಡನ್ನು ತಮ್ಮ ಅಕೌಂಟ್ಗೆ ಟ್ರಾನ್ಸ್ಫರ್ ಮಾಡಿಕೊಳ್ಳುತ್ತಾರೆ. 

  ದಯವಿಟ್ಟು ಈ ವಿಷಯವನ್ನು ನೀವು ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಏಕೆಂದರೆ ಇದರಿಂದ ಅವರಿಗೂ ಸಹಾಯವಾಗುತ್ತೆ ಇದರ ಬಗ್ಗೆ ಜ್ಞಾನ ಬರುತ್ತೆ ಏಕೆಂದರೆ ಕೆಲವು ಸಲ ನಾವು ನಮ್ಮ ಅಕೌಂಟ್ ನಿಂದ ಗೊತ್ತಿಲ್ಲದ್ದನ್ನು ಕಳೆದುಕೊಂಡಿರುತ್ತೇವೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)