Featured Post

Mathematics keyanswer Karnataka 2nd puc mathematics keyanswer 2024

ಇಮೇಜ್
Mathematics keyanswer Karnataka 2nd puc mathematics keyanswer 2024 Video section  click to watch

10ನೇ ತರಗತಿ ಪರೀಕ್ಷೆ ಗಳನ್ನು ರದ್ದು ಪಡಿಸಿ ಮುಂಬಡ್ತಿ ಮಾಡಲಾಗಿದೆ |AP, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ |ಕರ್ನಾಟಕ SSLC ಪರೀಕ್ಷೆ ರದ್ದು ಆಗಿಲ್ಲ.

10ನೇ ತರಗತಿ ಪರೀಕ್ಷೆ ಗಳನ್ನು ರದ್ದು ಪಡಿಸಿ ಮುಂಬಡ್ತಿ ಮಾಡಲಾಗಿದೆ |AP, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ |ಕರ್ನಾಟಕ SSLC ಪರೀಕ್ಷೆ ರದ್ದು ಆಗಿಲ್ಲ. 



ದೇಶದಲ್ಲಿ ಕೊರೋನಾ  ಹಾವಳಿಯಿಂದಾಗಿ ಶೈಕ್ಷಣಿಕ ಚಟುವಟಿಕೆಗಳ ಮೇಲೆ ಬಹಳಷ್ಟು ಹೊಡೆತ ಬಿದ್ದಿದ್ದು ಬಹಳಷ್ಟು ರಾಜ್ಯಗಳು 10ನೇ ತರಗತಿಯ ಪರೀಕ್ಷೆಯನ್ನು ರದ್ದು ಪಡಿಸಲು ನಿರ್ಧರಿಸಿದೆ ಅದರಲ್ಲಿ ಕೇರಳ ಮೂರು ವಿಷಯಗಳಿಗೆ ಪರೀಕ್ಷೆ ನಡೆಸಿದ್ದು ಈಗ ತಮಿಳುನಾಡು ಆಂಧ್ರಪ್ರದೇಶ ಹಾಗೂ ತೆಲಂಗಣ ಸೇರಿದಂತೆ 10ನೇ ತರಗತಿಯ ಪರೀಕ್ಷೆಗಳನ್ನು ರದ್ದುಪಡಿಸಿ ವಿದ್ಯಾರ್ಥಿಗಳಿಗೆ ಮುಂಬಡ್ತಿ ಮಾಡಲು ನಿರ್ಧರಿಸಿದೆ.

 ಆದರೆ ಕರ್ನಾಟಕದಲ್ಲಿ 10ನೇ ತರಗತಿಯ ಪರೀಕ್ಷೆಗಳನ್ನು ರದ್ದು ಪಡಿಸಿಲ್ಲ,  ಜೂನ್ 25ರಿಂದ ಪರೀಕ್ಷೆಯನ್ನು ನಡೆಸಲಾಗುತ್ತದೆ ಅಂತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

  ಕರ್ನಾಟಕದಲ್ಲಿ 10ನೇ ತರಗತಿಯ ಪರೀಕ್ಷೆಯನ್ನು ರದ್ದು ಪಡಿಸುವ ಯಾವುದೇ ವಿಚಾರವನ್ನು ಇದುವರೆಗೂ ವ್ಯಕ್ತಪಡಿಸಿಲ್ಲ, ಪರೀಕ್ಷೆ ನಡೆಸಲು  ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ ಹಾಗಾಗಿ ಪರೀಕ್ಷೆಯನ್ನು  ಜೂನ್ 25ರಿಂದ ನಡೆಸಲು ನಿರ್ಧರಿಸಲಾಗಿದ್ದು ಅದಕ್ಕೆ ಸಂಬಂಧಪಟ್ಟ ವೇಳಾಪಟ್ಟಿಯನ್ನು ಸಹ ಕರ್ನಾಟಕ SSLC ಬೋರ್ಡ್ ಬಿಡುಗಡೆ ಮಾಡಿದೆ.

ಇತ್ತೀಚಿಗೆ ಕರ್ನಾಟಕ ಪಿಯುಸಿ ಸೆಕೆಂಡ್ ಇಯರ್ ನ ಇಂಗ್ಲಿಷ್ ಪರೀಕ್ಷೆಯನ್ನು ಕೋರೋನಾ  ಹಾವಳಿಯ ನಡುವೆ ಯಶಸ್ವಿಯಾಗಿ ಪರೀಕ್ಷೆಯನ್ನು ನಡೆಸಿದ್ದು ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಪರೀಕ್ಷೆ ನಡೆಸಿದೆ.

 ಎಸೆಸೆಲ್ಸಿ ಪರೀಕ್ಷೆಯನ್ನು  ಸಹ ಮಕ್ಕಳ ಭವಿಷ್ಯ ದ  ಹಿತದೃಷ್ಟಿಯಿಂದ ಎಲ್ಲಾ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲು ನಿರ್ಧರಿಸಿದ್ದು ಪರೀಕ್ಷೆಯನ್ನು ನಡೆಸುತ್ತವೆ ಅಂತ ಹೇಳಿದ್ದಾರೆ.

SSLC ಪರೀಕ್ಷೆಯು ಕರ್ನಾಟಕದಲ್ಲಿ ರದ್ದುಪಡಿಸಿ ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡಬೇಕೆಂದು ಬಹಳಷ್ಟು ಜನ ವಿರೋಧ ವ್ಯಕ್ತಪಡಿಸಿದ್ದರು, SSLC ಪರೀಕ್ಷೆ ಸುರಕ್ಷಿತವಾಗಿ ನಡೆಸಲಾಗುತ್ತದೆ ಶಿಕ್ಷಣ ಇಲಾಖೆ ಸೂಚಿಸಿದೆ.  SSLC ಪರೀಕ್ಷೆ ರದ್ದು ಪಡಿಸಲು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಲಾಗಿತ್ತು ಆದರೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲನೆ ಮಾಡಿ ವಿದ್ಯಾರ್ಥಿಗಳಿಗೆ ತೊಂದರೆ ಆಗದೇ  ನಡೆಸಿ ಅಂತ ಹೇಳಿ ಪರೀಕ್ಷೆ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ

ಕರ್ನಾಟಕ ಸರ್ಕಾರ 10ನೇ ತರಗತಿಯ ಪರೀಕ್ಷೆಯನ್ನು ಜೂನ್ 25ರಿಂದ ನಡೆಸಲಾಗುತ್ತದೆ ಮತ್ತು ಅದರಲ್ಲಿ ಯಾವುದೇ ರೀತಿಯ ರದ್ದು ಆಗುವಂತಹ ನಿರ್ಧಾರ ಮಾಡಿಲ್ಲ ಅಂತ ಹೇಳಿದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)