Featured Post

Mathematics keyanswer Karnataka 2nd puc mathematics keyanswer 2024

ಇಮೇಜ್
Mathematics keyanswer Karnataka 2nd puc mathematics keyanswer 2024 Video section  click to watch

ಕರ್ನಾಟಕ ರಾಜ್ಯದಲ್ಲಿ SSLC ಪರೀಕ್ಷೆ ಮೊದಲ ದಿನದ ಸುದ್ದಿ |ಮಾರ್ಗಸೂಚಿ ಪಾಲಿಸಿ ಪರೀಕ್ಷೆ ನಡೆಸಿದ ಸರ್ಕಾರ |2020

 ಕರ್ನಾಟಕ ರಾಜ್ಯದಲ್ಲಿ SSLC ಪರೀಕ್ಷೆ ಮೊದಲ ದಿನದ ಸುದ್ದಿ |ಮಾರ್ಗಸೂಚಿ ಪಾಲಿಸಿ ಪರೀಕ್ಷೆ ನಡೆಸಿದ ಸರ್ಕಾರ |2020 



ಕರ್ನಾಟಕ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಗುರುವಾರ ನಡೆದಿದ್ದು ನಿರಾಂತಕವಾಗಿ ವಿದ್ಯಾರ್ಥಿಗಳು ಬರೆದಿದ್ದಾರೆ. 
 ಕರ್ನಾಟಕ ಸರ್ಕಾರ ಎಸೆಸೆಲ್ಸಿ ಪರೀಕ್ಷೆಯನ್ನು ನಡೆಸಲು ಮಾರ್ಗಸೂಚಿಯನ್ನು ಪಾಲಿಸಿದ್ದಾರೆ ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಸುಸೂತ್ರವಾಗಿ ನಡೆದಿದೆ. 
                           ಜಾಹಿರಾತು. 


  ವಿದ್ಯಾರ್ಥಿಗಳು ಹಾಗೂ ಪಾಲಕರು ಪಾಲಿಸಬೇಕಾದ ನಿಯಮಗಳನ್ನು ಮಾರ್ಗಸೂಚಿಯಲ್ಲಿ ಸೂಚಿಸಿದ್ದು ಅದನ್ನು ಪಾಲಕರು ಮತ್ತು ವಿದ್ಯಾರ್ಥಿಗಳು ಪಾಲನೆ ಮಾಡಿದ್ದಾರೆ. 

 ಇಂದು ಬೆಳಗ್ಗೆ ವಿದ್ಯಾರ್ಥಿಗಳು 8 ಗಂಟೆ 30 ನಿಮಿಷಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು ವಿದ್ಯಾರ್ಥಿಗಳಿಗೆ ಥರ್ಮಲ್  ಸ್ಕ್ಯಾನಿಂಗ್ ಮಾಡಲಾಗಿದೆ ಹಾಗೂ ಸ್ಯಾನಿಟೈಸರ್ ಮೂಲಕ ಅವರ ಕೈಗಳನ್ನು ಸ್ವಚ್ಛಗೊಳಿಸಿದ ನಂತರವೇ ವಿದ್ಯಾರ್ಥಿಗಳಿಗೆ ಪರೀಕ್ಷೆ ಕೊಠಡಿಗಳಿಗೆ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ. 

 ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು  ಮುಖಕ್ಕೆ ಮಾಸ್ಕ್ ಅನ್ನು ಧರಿಸಿದ್ದು ಮಾರ್ಗಸೂಚಿಯಲ್ಲಿ ಸೂಚಿಸಿರುವ ಹಾಗೆ ನಿಯಮಗಳನ್ನು ಪಾಲಿಸಿದ್ದಾರೆ. 

 ಇಂದು 10ನೇ ತರಗತಿಯ ಇಂಗ್ಲಿಷ್ ಪರೀಕ್ಷೆ 10 ಗಂಟೆ 30 ನಿಮಿಷಕ್ಕೆ ಆರಂಭವಾಗಿದ್ದು ಒಂದು ಗಂಟೆ 30 ನಿಮಿಷದವರೆಗೆ ಮೂರು ಗಂಟೆಗಳ ಕಾಲ ಪರೀಕ್ಷೆ ನಡೆದಿದೆ. 

 ಮಾರ್ಗಸೂಚಿಯಲ್ಲಿ ಸೂಚಿಸಿರುವ ಪರೀಕ್ಷಾ ಕೇಂದ್ರದಿಂದ ಸುತ್ತಲು 200ಮೀಟರ್ ಗಳವರೆಗೆ 144 ಸೆಕ್ಷನ್ ಜಾರಿಯಲ್ಲಿದ್ದು  ಜನರಿಗೆ ಪ್ರವೇಶವನ್ನು ನಿಷೇಧ ಮಾಡಲಾಗಿತ್ತು.  ಅದನ್ನು ಪಾಸ್ ವಲಯ ಎಂದು ಪರಿಗಣಿಸಿ ಸಿಬ್ಬಂದಿಗಳಿಗೆ ಹಾಗೂ ಹಾಲ್ ಟಿಕೆಟ್ ಅನ್ನು ಹೊಂದಿರುವಂತಹ ಮಕ್ಕಳಿಗೆ ಮಾತ್ರ ಪ್ರವೇಶವನ್ನು ನೀಡಿದ್ದರು. 

 ಇಂದು ಎಸ್ಎಸ್ಎಲ್ಸಿ ಪರೀಕ್ಷೆ ಯಾವುದೇ ಗೊಂದಲವಿಲ್ಲದೆ ಸುಸೂತ್ರವಾಗಿ ಮಾರ್ಗಸೂಚಿಯನ್ನು ಪಾಲನೆ ಮಾಡಿ ಪರೀಕ್ಷೆಯನ್ನು   ನಡೆಸಿದೆ. 

  ಕೊರೋನಾ ಸೋಂಕು ಹಾವಳಿಯಿಂದಾಗಿ ಇಂದು ವಿದ್ಯಾರ್ಥಿಗಳು ಹಾಜರಾಗದೆ ಇದ್ದರೆ ಅಂತಹ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಅವಕಾಶ ಮಾಡಿಕೊಡಲಾಗಿದ್ದು ಅವರಿಗೆ ಪುನರಾವರ್ತಿತ ವಿದ್ಯಾರ್ಥಿಗಳೆಂದು  ಪರಿಗಣಿಸಿದೆ ಫಲಿತಾಂಶವನ್ನು ನೀಡುವುದಾಗಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ. 

 ವಿದ್ಯಾರ್ಥಿಗಳ ಜೊತೆ ಪರೀಕ್ಷಾ ಕೇಂದ್ರಕ್ಕೆ ಬಂದ ಪೋಷಕರಿಗೆ ಕೋರೋನಾ ಕರಪತ್ರವನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು ಎಲ್ಲಾ ಪರೀಕ್ಷೆ ಕೇಂದ್ರಗಳ ಬಳಿ ಪೊಲೀಸ್ ಪಹರೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಯಾವುದೇ ಸಮಸ್ಯೆ ಉಂಟಾಗಿಲ್ಲ. 

 ಮುಂದಿನ ಪರೀಕ್ಷೆ ಜೂನ್ 27ರಂದು ಶನಿವಾರ ಇದೆ, ಅಂದು  ಗಣಿತ ಪರೀಕ್ಷೆ ನಡೆಯಲಿದೆ ಎಲ್ಲಾ ಎಸೆಸೆಲ್ಸಿ ವಿದ್ಯಾರ್ಥಿಗಳು  ದಯವಿಟ್ಟು ಮಾರ್ಗಸೂಚಿಯಲ್ಲಿ ಸೂಚಿಸಿರುವ ನಿಯಮಗಳನ್ನು ಪಾಲಿಸಿ ಸುರಕ್ಷಿತವಾಗಿ ಪರೀಕ್ಷೆಯನ್ನು ಬರೆಯಿರಿ ಎಲ್ಲರಿಗೂ All the Best 👍

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)