Featured Post

Mathematics keyanswer Karnataka 2nd puc mathematics keyanswer 2024

ಇಮೇಜ್
Mathematics keyanswer Karnataka 2nd puc mathematics keyanswer 2024 Video section  click to watch

ಅಗಷ್ಟ 20 ರಂದು CET ಫಲಿತಾಂಶ, ಎಂದು ಡಾ.ಸಿ.ಎನ್.ಅಶ್ವಥನಾರಾಯಣ ಹೇಳಿಕೆ.

 ಅಗಷ್ಟ 20 ರಂದು CET ಫಲಿತಾಂಶ, ಎಂದು ಡಾ.ಸಿ.ಎನ್.ಅಶ್ವಥನಾರಾಯಣ ಹೇಳಿಕೆ.



ಬೆಂಗಳೂರು;

ಅಗಷ್ಟ ತಿಂಗಳದ 20 ನೇ ದಿನಾಂಕದಂದು ಸಾಮಾನ್ಯ ಪ್ರವೇಶ ಪರೀಕ್ಷೆ (CET) ಫಲಿತಾಂಶ ತಿಳಿಸಲಾಗುತ್ತದೆ. ಮತ್ತು   ಕೂರೋನಾ ಎಂಬ ಸೋಂಕು ಹರಡುತ್ತಿರುವದು,‌ಹಾಗು ಪ್ರವಾಹ ಸಂಕಷ್ಟದ ಕಾರಣ ಎಂಜಿನಿಯರಿಂಗ್‌ ಸೀಟುಗಳ ಹಂಚಿಕೆ ಅನುಪಾತ ಮತ್ತು ಶುಲ್ಕ ಸ್ವರೂಪ ಕಳೆದ ವರ್ಷದಂತೆಯೇ ಈ ವರ್ಷವೂ ಮುಂದುವರಿಯಲಿದೆ ಎಂದು ಉನ್ನತ ಶಿಕ್ಷಣ ಸಚಿವರಾದ, ಉಪಮುಖ್ಯಮಂತ್ರಿ, ಡಾ.ಸಿ.ಎನ್‌.ಅಶ್ವತ್ವನಾರಾಯಣ ಹೇಳಿದ್ದಾರೆ.


ಎಂಜಿನಿಯರಿಂಗ್‌ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಕಾಮೆಡ್‌-ಕೆ, ಕರ್ನಾಟಕ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಸಂಘ ಹಾಗೂ ರಾಜ್ಯ ಧಾರ್ಮಿಕ ಅಲ್ಪಸಂಖ್ಯಾತ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘದ ಪ್ರತಿನಿಧಿಗಳ ಜೊತೆ  ಉಪಮುಖ್ಯಮಂತ್ರಿ, ಡಾ.ಸಿ.ಎನ್‌.ಅಶ್ವತ್ವನಾರಾಯಣ ಸೋಮವಾರ ಸಭೆ ನಡೆಸಿದ ಬಳಿಕ ಮಾತನಾಡಿದರು.


45:30:25 ಅನುಪಾತ: ಎಂಜಿನಿಯರಿಂಗ್‌ ಕಾಲೇಜುಗಳು ಶೇ 45ರಷ್ಟು ಸೀಟುಗಳನ್ನು ಸರ್ಕಾರಕ್ಕೆ ನೀಡಿದರೆ, ಶೇ 30ರಷ್ಟು ಸೀಟುಗಳನ್ನು ಕಾಮೆಡ್‌ ಕೆಗೆ ಹಂಚಿಕೆ ಮಾಡಲಾಗುತ್ತದೆ. ಶೇ 25ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರು, ಆಡಳಿತ ಮಂಡಳಿ ಕೋಟಾಗೆ ಮೀಸಲಿಡಲಾಗಿದೆ. ಇನ್ನು ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ಕ್ರಮವಾಗಿ ಶೇಕಡಾ 40:30:30ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಶೇ 40ರಷ್ಟು ಸೀಟುಗಳು ಸರ್ಕಾರಕ್ಕೆ, ಶೇ 30ರಷ್ಟು

ಸೀಟು ಅಲ್ಪಸಂಖ್ಯಾತರು ಮತ್ತು ಭಾಷಾ ಅಲ್ಪಸಂಖ್ಯಾತರಿಗೆ ನೀಡಲಾಗುತ್ತದೆ. ಉಳಿದ ಶ ೇ 30ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರು, ಆಡಳಿತ ಮಂಡಳಿ ಕೋಟಾಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.


ಆನ್‌ಲೈನ್‌ ಕೌನ್ಸೆಲಿಂಗ್‌ ಯಾವಾಗ್ ನಡೆಯುತ್ತೆ?

ಅಕ್ಟೋಬರ್‌ ಒಳಗೆ ಆನ್‌ಲೈನ್‌ ಕೌನ್ಸೆಲಿಂಗ್‌ ನಡೆಯಲಿದೆ. ವಿದ್ಯಾರ್ಥಿಗಳು ತಾವು ಇರುವ ಸ್ಥಳದಿಂದಲೇ  ಕೌನ್ಸೆಲಿಂಗ್‌ಗೆ ಹಾಜರಾಗಬಹುದು, ಕಾಲೇಜು ಆಯ್ಕೆ ಮಾಡಿಕೊಂಡ ಬಳಿಕ ಆಯಾ ಕಾಲೇಜಿಗೆ ತೆರಳಿ ಪ್ರವೇಶ ಪಡೆಯಬೇಕು. ಎರಡು ಸುತ್ತು ಕೌನ್ಸೆಲಿಂಗ್‌ ಮತ್ತು ಒಂದು ಬಾರಿ ವಿಸ್ತರಿತ ಕೌನ್ಸೆಲಿಂಗ್‌ ಇರುತ್ತದೆ. ಅದರ ಹೊರತಾಗಿ ಹೆಚ್ಚುವರಿ ಕೌನ್ಸೆಲಿಂಗ್‌ ಈ ಬಾರಿ ನಾಡಿಸಲಾಗುವದಿಲ್ಲ ಎಂದು ಹೇಳಿದ್ದಾರೆ.


ಶುಲ್ಕ ಬಗ್ಗೆ ಮಾಹಿತಿ;

ಶುಲ್ಕಕ್ಕೆ ಸಂಬಂಧಿಸಿದಂತೆ, ಒಂದು ಸಂರಚನೆಯಲ್ಲಿ, ಸಿಇಟಿ ವಿದ್ಯಾರ್ಥಿಗಳಿಗೆ ತಲಾ ರೂ.65,360 ಹಾಗೂ ಕಾಮೆಡ್‌-ಕೆ ವಿದ್ಯಾರ್ಥಿಗಳಿಗೆ ರೂ.1,43,748 ನಿಗದಿ ಮಾಡಲಾಗಿದೆ. ಇನ್ನೊಂದರಲ್ಲಿ ಸಿಇಟಿ ವಿದ್ಯಾರ್ಥಿಗಳಿಗೆ ರೂ. 58,806 ಹಾಗೂ ಕಾಮೆಡ್‌-ಕೆ ವಿದ್ಯಾರ್ಥಿಗಳಿಗೆ ರೂ.2,01,960 ನಿಗದಿ ಮಾಡಲಾಗಿದೆ" ಎಂದು  ಉಪಮುಖ್ಯಮಂತ್ರಿ, ಡಾ.ಸಿ.ಎನ್‌.ಅಶ್ವತ್ವನಾರಾಯಣ ತಿಳಿಸಿದ್ದಾರೆ.


ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)