Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

Karnataka PUC Lectures Selection list will be published on 26 August 2019|PUC 2019|Recruitment 2019

Karnataka PUC Lectures Selection list will be published on 26 August 2019|PUC 2019|Recruitment 2019


ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ನೇಮಕಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಪರೀಕ್ಷಾ ಪ್ರಾಧಿಕರವು 2015ನೇ ಮೇ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಆಗಸ್ಟ್ 26 ರಂದು ಕೆಇಎ ಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದೆ. 

ಈ ಅಧಿಸೂಚನೆ ಪ್ರಕಟಗೊಂಡು 4 ವರ್ಷ 3 ತಿಂಗಳು ಕಳೆದಿವೆ. ಈಗ ನೇಮಕಾತಿಯ ಅಂತಿಮ ಹಂತ ತಲುಪಿದ್ದು, ವೆಬ್‌ಸೈಟ್‌ನಲ್ಲಿ ಸೂಚಿಸಲಾದ ದಿನಾಂಕದಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದ್ದಲ್ಲಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.  

2015 ಮೇ ತಿಂಗಳಲ್ಲಿ 1193 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 68054 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಕೂರಲು ಹಾತುರತೆಯಿಂದ ಕಾದು ಕಾದು ಹತಾಶೆಗೊಂಡಿದ್ದರು. ಕಳೆದ ನವೆಂಬರ್ ನಿಂದ(2018) ಈ ನೇಮಕಾತಿ ಪ್ರಕ್ರಿಯೆ ಮುಂದುವರೆಸಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ನವೆಂಬರ್ 29 ರಂದು ಲಿಖಿತ ಪರೀಕ್ಷೆ ನಡೆಸಿತ್ತು. ನಂತರ ಮೇ 04, 2019 ರಂದು ಕೀ ಉತ್ತರಗಳನ್ನು ಪ್ರಕಟಿಸಿ, ಜೂನ್ ವೇಳೆಗೆ 1:2 ಅನುಪಾತದಲ್ಲಿ ಆಯ್ಕೆ ಪಟ್ಟಿ ಪ್ರಕಟಿಸಿ ದಾಖಲೆಗಳ ಪರಿಶೀಲನೆಗೆ ಅಭ್ಯರ್ಥಿಗಳನ್ನು ಕರೆದಿತ್ತು. ಜುಲೈ 17 ರಂದು ದಾಖಲೆ ಪರಿಶೀಲನೆ ಮಾಡಿತ್ತು. ಪ್ರಸ್ತುತ ದಾಖಲೆ ಪರಿಶೀಲನೆ ಮುಗಿದ ಹಿನ್ನೆಲೆಯಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಸಜ್ಜಾಗಿದೆ.  

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪಿಯು ಉಪನ್ಯಾಸಕರ ನೇಮಕಾತಿಗಾಗಿ ಎರಡು ಬಾರಿ ಅಧಿಸೂಚನೆ ಹೊರಡಿಸಿ, ಹುದ್ದೆಗಳ ಸಂಖ್ಯೆಯಲ್ಲಿ ಒಮ್ಮೆ ತಿದ್ದುಪಡಿ ಸಹ ಮಾಡಿ, ಹಲವು ಏಳು ಬೀಳುಗಳನ್ನು ಕಂಡಿತ್ತು. ಈ ನೇಮಕಾತಿ ಪ್ರಕ್ರಿಯೆ ಈಗ ಆಗಸ್ಟ್ 26 ಕ್ಕೆ ಆಯ್ಕೆ ಪಟ್ಟಿ ಪ್ರಕಟಿಸುವ ಮೂಲಕ ಅಂತಿಮ ಗೊಳ್ಳುವ ಸಾಧ್ಯತೆ ಇದೆ. 

ಅಭ್ಯರ್ಥಿಗಳು ಆಯ್ಕೆ ಪಟ್ಟಿಯನ್ನು ಕೆಇಎ ಅಧಿಕೃತ ವೆಬ್‌ಸೈಟ್‌ https://cetonline.karnataka.gov.in/kea/Recruit ಗೆ ಭೇಟಿ ನೀಡಿ ಚೆಕ್‌ ಮಾಡಬಹುದು 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)