ಪದವಿ ಹಾಗೂ ಸ್ನಾತಕೋತರ ಪರೀಕ್ಷೆ ಕುರಿತು ಉನ್ನತ ಶಿಕ್ಷಣ ಸಚಿವರು heliddenu? ಪರೀಕ್ಷೆ ಯಾವಾಗ? ಮುಂದಿನ ಅಕಾಡೆಮಿಕ್ ಆರಂಭ ಯಾವಾಗ?
ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಕುರಿತು ಜೂನ್ ಮೊದಲ ವಾರದಲ್ಲಿ ಸೂಕ್ತ ನಿರ್ಧಾರ ಪ್ರಕಟಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರು ಆಗಿರುವ ಡಾಕ್ಟರ್ ಅಶ್ವತ್ ನಾರಾಯಣ್ ಅವರು ಹೇಳಿದರು.
Covid -19 ಕುರಿತು ಸಮರ್ಥ ಭಾರತ ಫೇಸ್ಬುಕ್ ಪೇಜ್ ಇನ ಲೈವ್ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದ ಅವರು ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ನಡೆಸುವ ಸಂಬಂಧ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ಜತೆ ಐದು ಬಾರಿ ವಿಡಿಯೋ ಸಂವಾದ ನಡೆಸಲಾಗಿದ್ದು, ಪರೀಕ್ಷೆಗಳ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಈ ಬಗ್ಗೆ ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳದೆ ಆನ್ಲೈನ್ ತರಗತಿಗಳಿಗೆ ಹಾಜರಾಗಿ ಉತ್ತಮವಾಗಿ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಸಹ ಆನ್ಲೈನ್ ತರಗತಿಗಳು ನಡೆಸುತ್ತಿದೆ, ಪ್ರಾಧ್ಯಾಪಕರು ಆನ್ಲೈನ್ ತರಗತಿ ಜೊತೆಗೆ ಪ್ರಯೋಗಿಕ ತರಗತಿ, ಪ್ರಾಜೆಕ್ಟ್ ವರ್ಕ್ ಮಾಡಲು ನಿರ್ವಹಿಸುತ್ತಿದ್ದಾರೆ ಹಾಗೂ ನೆರವಾಗುತ್ತಿದ್ದಾರೆ.
ಸಿಇಟಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ತರಗತಿ ಕಾರ್ಯಕ್ರಮ ನಡೆಸುತ್ತಿದೆ.
ದ್ವಿತೀಯ ಹಾಗೂ ತೃತೀಯ ಪದವಿ ತರಗತಿಗಳು ಆಗಸ್ಟ್ನಲ್ಲಿ ಹಾಗೂ ಪ್ರಥಮ ವರ್ಷದ ಪದವಿ ತರಗತಿಗಳು ಸೆಪ್ಟೆಂಬರ್ ನಿಂದ ಆರಂಭವಾಗಲಿದೆ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ