Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ಹಾಗೂ ಕೊರೋನಾ ಸೋಂಕು ಟೆಸ್ಟ್ ಬಹಿರಂಗ. |ಬಾಲಿವೂಡ್ ನಟನ ಆತ್ಮಹತ್ಯೆಗೆ ಕಾರಣ? ಆಪ್ತರ ಹೇಳಿಕೆ

ಸುಶಾಂತ್ ಸಿಂಗ್ ಮರಣೋತ್ತರ ಪರೀಕ್ಷೆ ಹಾಗೂ ಕೊರೋನಾ ಸೋಂಕು ಟೆಸ್ಟ್ ಬಹಿರಂಗ. 


ಜೂನ್ 14, ಭಾನುವಾರ ಬಾಲಿವುಡ್ ಉತ್ತಮ ಹಾಗೂ ಚಿಕ್ಕ ವಯಸ್ಸಿನ ನಟ ಸುಶಾಂತ್ ಸಿಂಗ್ ಅವರನ್ನು ಕಳೆದು ಕೊಂಡಿದ್ದು ನಮ್ಮೆಲರಿಗೂ  ತುಂಬಾ ಆಘಾತವಾಗಿದೆ.  

34 ವರ್ಷದ ಸುಶಾಂತ್ ಸಿಂಗ್ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. 

ನಿನ್ನೆ ಬೆಳಗ್ಗೆ ಅವರ ಮನೆ ಕೆಲಸದವರು ನೋಡಿದಾಗ ಈ ವಿಷಯ ಗೊತ್ತಾಗಿತ್ತು,  ಬೆಡ್ರೂಮ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್ ಸಿಂಗ್ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. 

ಹಾಗೂ ಕೊರೋನಾ ಟೆಸ್ಟ್ ಸಹ ಮಾಡುವಂತೆ ಸೂಚಿಸಲಾಗಿತ್ತು. ಕಳೆದ 6 ತಿಂಗಳಿಂದ  ಖಿನ್ನತೆಯಿಂದ ಬಳಲುತ್ತಿದ್ದರು ಹಾಗೂ ಮಾನಸಿಕವಾಗಿ ತೊಂದರೆ ಅನುಭವಿಸುತ್ತಿದ್ದರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಕೊರೋನಾ ಟೆಸ್ಟ್ ರಿಸಲ್ಟ್? 
ಸುಶಾಂತ್ ಗೆ ಕರೋನವೈರಸ್ ಟೆಸ್ಟ್ ಕೂಡ ಮಾಡಲಾಗಿದ್ದು ವರದಿ ನೆಗೆಟಿವ್ ಬಂದಿದೆ ಈ ಮೂಲಕ ಅವರಿಗೆ ಕಂಡಿರಲಿಲ್ಲ ಎಂಬುದು ದೃಢಪಟ್ಟಿದೆ ಎಂದು ಅಂತ್ಯಕ್ರಿಯೆ ನಡೆಯಲಿದೆ ಮಾತ್ರ ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. 

ಮರಣೋತ್ತರ ಪರೀಕ್ಷೆ ಫಲಿತಾಂಶ ಏನು ಹೇಳುತ್ತದೆ? 

ನಿನ್ನೆ ರಾತ್ರಿ ಸುಶಾಂತ್ ಸಿಂಗ್ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು, ಬಹಳಷ್ಟು ಬಾಲಿವುಡ್ ನಟ, ನಿರ್ದೇಶಕರು ಹೇಳಿರುವ ಹಾಗೆ, ಸುಶಾಂತ್ ವ್ಯಕ್ತಿತ್ವ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ವಾದದ್ದು ಅಲ್ಲ, ಅವರು ಬಹಳ ಧೈರ್ಯ ಹಾಗೂ ಮಾನಸಿಕವಾಗಿ ಸದೃಢ ವ್ಯಕ್ತಿ ಹಾಗಾಗಿ ಆತ್ಮಹತ್ಯೆ ಅಲ್ಲ ಇದು ಕೊಲೆ ಇರಬಹುದು ಅಂತಾ ಟ್ವೀಟ್ ಮಾಡಿದ್ದಾರೆ. 
ಸುಶಾಂತ್ ಸಿಂಗ್ ಕೈಯಲ್ಲಿ ಬಹಳಷ್ಟು ಆಫರ್ಸ್ ಗಳಿದ್ದು ಯಾವುದೇ ಆರ್ಥಿಕವಾಗಿ ಸಮಸ್ಯೆ ಇರಲಿಲ್ಲ ಆದರೆ ಅವರು ಬಹಳ ಸಿಟ್ಟಿನ ವ್ಯಕ್ತಿ ಆಗಿದ್ದು ಬಹಳಷ್ಟು ಜನ ದೂರವಾಗಿದ್ದಾರೆ ಅಂತಾ ಸುಶಾಂತ್ ಇನ್ಸೈಡರ್ tag ನೊಂದಿಗೆ ಅವರ ಆಪ್ತರು ಹೇಳಿಕೊಂಡಿದ್ದಾರೆ. 
ಇದಲ್ಲದೆ ಅವರ ಗೆಳೆಯರು ಹಾಗೂ ಆಪ್ತರು ಹೇಳಿಕೊಂಡಿರುವ ಹಾಗೆ ಇತ್ತೀಚಿಗೆ ಸುಶಾಂತ್ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದು, ಯಾರೊಂದಿಗೂ ಸರಿಯಾಗಿ ಬೇರಿತ ಇರಲಿಲ್ಲ ಅಂತಾ ಹೇಳಿಕೊಂಡಿದ್ದಾರೆ. 

ನಿನ್ನೆ ತಡ ರಾತ್ರಿ ನಡೆದ ಮರಣೋತ್ತರ ಪರೀಕ್ಷೆಯಲ್ಲಿ ಕಂಡುಬಂದಿದ್ದು ಏನು ಅಂದ್ರೆ,  ಸುಶಾಂತ್ ಸಿಂಗ್ ದೇಹದ ಮೇಲೆ ಯಾವುದೇ ಗಾಯಗಳಿಲ್ಲ, ಇದು ನೇಣು ಬಿಗಿದುಕೊಂಡು ಉಸಿರುಗಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ವರದಿ ಬಹಿರಂಗ ವಾಗಿದೆ. 
ಸುಶಾಂತ್ ಸಿಂಗ್ ಅಂತಾ ಪ್ರತಿಭಾವಂತ ನಟನಿಗೆ ಕಳೆದುಕೊಂಡಿದ್ದು ನಮ್ಮೆಲರಿಗೂ ದೊಡ್ಡ ಆಘಾತ ಹಾಗೂ 2020 ಕೆಟ್ಟ ವರ್ಷ ವಾಗಿದೆ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)