Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಜಾತ್ರಿಯಲ್ಲಿ ಕಳೆದ ಹುಡುಗ ಕನ್ನಡದಲ್ಲಿ 124 ಅಂಕ ಪಡೆದ.

 ಜಾತ್ರಿಯಲ್ಲಿ ಕಳೆದ ಹುಡುಗ ಕನ್ನಡದಲ್ಲಿ 124 ಅಂಕ ಪಡೆದ.


ದಾವಣಗೆರೆ;

ಮಗುವಾಗಿರುವಾಗ ಜಾತ್ರೆಯಲ್ಲಿ ಕಳೆದುಕೊಂಡಿದ್ದ ಸ್ವಲ್ಪ ದೊಡ್ಡವನಾದ ಮೇಲೆ ಸಾಕುಮನೆಯಿಂದ ತಪ್ಪಿಸಿಕೊಂಡು ಓಡಿದ್ದ, ದನ ಮೇಯಿಸಿಕೊಂಡಿದ್ದ. ಕೊನೆಗೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ ಹುಡುಗ ಈ ಬಾರಿ SSLC  ಪರೀಕ್ಷೆಯ ಕನ್ನಡದಲ್ಲಿ125ಕ್ಕೆ 124 ಅಂಕ ತಗೆದುಕೊಂಡ.


ಬಾಲಕರ ಬಾಲಮಂದಿರದಲ್ಲಿ ಇರುವ ಸಚಿನ್‌ ಎಂಬ ಹುಡುಗನೇ SSLC ಪರೀಕ್ಷೆಯು ಹುಬ್ಬೇರಿಸುವಂತೆ ಮಾಡಿದ್ದಾನೆ. ಈತನ ಜತೆಗೆ ಮಾತನಾಡಿದಾಗ ತಂದೆ ತಾಯಿ ಹೇಗಿದ್ದಾರೆ ಎಂಬ ನೆನಪೇ ಇಲ್ಲ ಅಂತ ಹೇಳಿದ.


ನನಗೆ 2 3 ವರ್ಷ  ಆಗಿರಬೇಕು, ಆಗ ಬೆಂಗಳೂರಿನ ಯಾವುದೋ ಒಂದು ಜಾತ್ರೆಯಲ್ಲಿ ಕಳೆದು ಹೋಗಿದ್ದೆ. ಆಳುತ್ತಾನಿಂತಿದ್ದ ನನ್ನನ್ನು ಮಾರುತಿ ನಗರದ ಸರೋಜಮ್ಮ-ರಾಮಪ್ಪ ಎಂಬವರು ಕರೆದುಕೊಂಡು ಹೋಗಿದ್ದರು. ಅಲ್ಲಿ ಐದಾರು ವರ್ಷ ಅವರ ಜೊತೆಯಲ್ಲಿದ್ದೆ. ನಾನು ಜಾತ್ರೆಯಲ್ಲಿ ಸಿಕ್ಕಿದವ ಎಂಬುದು ಆ ಮನೆಯಲ್ಲೇ ಮುಂದೆ ನನಗೆ ಗೊತ್ತಾಗಿದ್ದು. ಅಲ್ಲಿ ಇರಲು ನನಗೆ ಇಷ್ಟವಾಗಲಿಲ್ಲ. ಅದಕ್ಕೆ 6 -7  ವರ್ಷಗಳ ಹಿಂದೆ ಒಂದು ದಿನ ರೈಲು ನಿಲ್ದಾಣಕ್ಕೆ ಬಂದು ರೈಲು ಹತ್ತಿಬಿಟ್ಟೆ.ಆ ರೈಲಿನಲ್ಲಿ ಗಿರಿಜಮ್ಮಎಂಬ ಮಹಿಳೆ ನನ್ನ ಜೊತೆ ಮಾತನಾಡಿದರು. ನನ್ನ ಬಗ್ಗೆ ತಿಳಿದುಕೊಂಡು ಅವರು ನನಗೆ ಅವರ ಜೊತೆಯಲ್ಲಿ  ಕರೆದುಕೊಂಡು ಹೋದರು.ಅದು ಹರಿಹರದಲ್ಲಿ ಅವರ ಪರಿಚಯದವರ ಮನೆ.ಅಲ್ಲಿ ನನ್ನನ್ನು ಇರಿಸಿದರು' ಎಂದು ಸಚಿನ್‌ ನೆನಪಿಸಿಕೊಂಡು ಹೇಳಿದ. 


ಹರಿಹರದಲ್ಲಿ ನನ್ನನ್ನು ದನ ಕಾಯಲು ಹಚ್ಚಿದರು.6 ತಿಂಗಳು ದನ ಕಾಯುವ ಕೆಲಸ ಮಾಡಿದೆ.ಈ ಕೆಲಸ ಬೇಡ ಎಂದು ಬೆಂಗಳೂರಿಗೆ ವಾಪಸ್ ಬರೆಯುವ ನಿರ್ಧಾರ್ ಮಾಡಿದೆ. ಹರಿಹರ ರೈಲು ನಿಲ್ದಾಣಕ್ಕೆ ಬಂದೆ ರೈಲು ಬಂದಿರಲಿಲ್ಲ. ಅಲ್ಲೇ ಸುತ್ತಾಡುತ್ತಿದ್ದೆ. ಅಷ್ಟು ಹೊತ್ತಿಗೆ ಹರಿಹರದ ಪೊಲೀಸರು ಬಂದು ನನ್ನನ್ನು ಕರೆದುಕೊಂಡು ಹೋದರು' ಎಂದು 6 ವರ್ಷದ ಹಿಂದಿನ ಘಟನೆಯನ್ನು ಸಚಿನ್ ಹೇಳಿದ್ದಾನೆ.


ಮೊದಲು ಚಿತ್ರದುರ್ಗದ ಬಾಲ ಮಂದಿರಕ್ಕೆ ಸೇರಿಸಿದರು, ಅಲ್ಲಿಯವರೆಗೆ ಶಾಲೆಯ ಮೆಟ್ಟಿಲು ಹತ್ತಿರಲಿಲ್ಲ. ನನ್ನ ವಯಸ್ಸು ನೋಡಿ ನೇರವಾಗಿ 5ನೇ ಕ್ಲಾಸ್‌ಗೆ ಸೇರಿಸಿದರು. 9ನೇ ತರಗತಿವರೆಗೆ ಚಿತ್ರದುರ್ಗದಲ್ಲಿನೇ ಓದಿದೆ. ಬಳಿಕ ದಾವಣಗೆರೆಯ ಬಾಲಕರ ಬಾಲ ಮಂದಿರಕ್ಕೆ ಬಂದೆ ಎಂದು ಹೇಳಿದ.

ನಮ್ಮಲ್ಲಿ 14 ವರ್ಷ ದಾಟಿದ ಮೇಲಿನ ಮಕ್ಕಳನ್ನು ಮಾತ್ರ ಇಟ್ಟುಕೊಳ್ಳಲು ಅವಕಾಶ ಇದೆ.ಹಾಗಾಗಿ ಸಚಿನ್‌ ಆರಂಭದಲ್ಲಿ ಚಿತ್ರದುರ್ಗದಲ್ಲಿದ್ದ. ಅವನ ಆಸಕ್ತಿಗೆ ಅನುಗುಣವಾಗಿ ನಾವು ಓದಿಸಲು ತಯಾರಿದ್ದೇವೆ. 21 ವರ್ಷದವರೆಗೆ ಇಟ್ಟುಕೊಳ್ಳಲು ನಮಗೆ ಅವಕಾಶವಿದೆ. ಅಷ್ಟು ಹೊತ್ತಿಗೆ 4 ವರ್ಷದ ಕೋರ್ಸ್‌ ಮುಗಿಯದಿದ್ದರೆ, ಮುಗಿಯುವವರೆಗೆ ಇಲ್ಲಿ ಇಟ್ಟುಕೊಂಡು ಓದಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್‌. ವಿಜಯಕುಮಾರ್ ಅವರು ಹೇಳಿದ್ದಾರೆ.‌


ಸಚಿನನು ರಾತ್ರಿ 12  ಗಂಟೆಯವರೆಗೂ ಓದುತ್ತಿದ್ದ, 11 ಗಂಟೆಗೆ ಮಲಗಿ ಬೆಳಿಗ್ಗೆ ಬೇಗ ಏಳಿ ಎಂದು ನಾವೇ ಹೇಳುತ್ತಿದ್ದೆವು. ಬೆಳಿಗ್ಗೆ ಬೇಗ ಎದ್ದು ಎಲ್ಲರನ್ನು ಎಬ್ಬಿಸುತ್ತಿದ್ದ. ಅಂದಿನ ಪಾಠಗಳನ್ನು ಅಂದೇ ಓದಿಕೊಳ್ಳುವುದು, ಹೋಂವರ್ಕ್‌ಗಳನ್ನು ಮರುದಿನಕ್ಕೆ ಇಡದೇ ಅಂದೇ ಮುಗಿಸುವುದು ಮಾಡಬೇಕು ಎಂದು ನಾವು ಹೇಳುತ್ತಿದ್ದೆವು. ಮಕ್ಕಳೂ ಅದನ್ನು ಅನುಸರಿಸುತ್ತಿದ್ದರು' ಎಂದು ಬಾಲ ಮಂದಿರದ ಅಧೀಕ್ಷಕಿ ಜ್ಯೋತಿಕೆ.ಎಚ್‌. ಅವರು ಹೇಳಿದ್ದಾರೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)