Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

GULBARGA UNIVERSITY ಯ ವಿಭಾಗ್ ಮುಖ್ಯಸ್ಥರ ಮೇಲೆ ಪ್ರಾಧ್ಯಾಪಕನಿಂದ ಹಲ್ಲೆ.

 GULBARGA UNIVERSITY ಯ ವಿಭಾಗ್ ಮುಖ್ಯಸ್ಥರ ಮೇಲೆ ಪ್ರಾಧ್ಯಾಪಕನಿಂದ ಹಲ್ಲೆ.


ಕಲಬುರಗಿ;

ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವಿದ್ಯಾಸಾಗರ ಅವರ ಮೇಲೆ ಮನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮಾಜಿ ಪ್ರಭಾರ ಕುಲಪತಿ ಪ್ರೊ.ಎಸ್‌.ಕೆ.ಮೇಲಕೇರಿ ಅವರು ಮಂಗಳವಾರ ಹಲ್ಲೆ ನಡೆಸಿದ್ದರು, ಈ ಸಂಬಂಧ ವಿದ್ಯಾಸಾಗರ್‌ ಅವರು ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲೆ ಮಾಡಿದ್ದಾರೆ.


ಮೇಲಕೇರಿ ಅವರ ಸಂಬಂಧಿ ಸಸ್ಯಶಾಸ್ತ್ರ ವಿಭಾಗದಲ್ಲಿ ಪಿಎಚ್‌.ಡಿ. ಪದವಿಗಾಗಿ ಅರ್ಜಿಸಲ್ಲಿಸಿದ್ದರು. ಆದರೆ ಮೆರಿಟ್‌ ಪಟ್ಟಿಯಲ್ಲಿ ಹೆಸರು ಬಂದಿರಲಿಲ್ಲ. ಆಗ ಪ್ರಭಾರ ಕುಲಪತಿಯಾಗಿದ್ದ ಮೇಲಕೇರಿ ಅವರು ಪಿಎಚ್‌.ಡಿ. ಸೀಟು ಕೊಡುವಂತೆ ಒತ್ತಡಹೇರಿದ್ದರು. ಆದರೆ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ವಿದ್ಯಾಸಾಗರ್‌ ನಿರಾಕರಿಸಿದ್ದರು. ಇದು ಮೇಲಕೇರಿ ಅವರಸಿಟ್ಟಿಗೆ ಕಾರಣವಾಗಿತ್ತು ಎನ್ನಲಾಗಿದೆ. ಆದಾಗ್ಯೂ ಅದೇ ವಿಭಾಗದಲ್ಲಿ ಎಂ.ಫಿಲ್‌. ಪದವಿಗೆಸೀಟುಸಿಕ್ಕಿತ್ತು. ಆದರೆ, ವಿದ್ಯಾರ್ಥಿ ಪೂರ್ಣಪ್ರಮಾಣದಲ್ಲಿ ಸಂಶೋಧನೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದರೂ ಬೇರೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸಮಾಡುತ್ತಿದ್ದುದರಿಂದ ವಿದ್ಯಾಸಾಗರ್‌ ಅವರು ಶಿಷ್ಯವೇತನದ ಮಂಜೂರಾತಿ ಪತ್ರಕ್ಕೆ ಸಹಿ ಹಾಕಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಮೇಲಕೇರಿ ಅವರು ವಿದ್ಯಾಸಾಗರ್‌ ಅವರ ಕಚೇರಿಗೆ ಬಂದು ವಾಗ್ದಾದ ಮಾಡಿ ವಿದ್ಯಾಸಾಗರ್‌ ಅವರ ಕಪಾಳಕ್ಕೆ ಹೊಡದಿದ್ದಾರೆ. ಹೀಗಾಗಿ ವಿದ್ಯಾಸಾಗರ್‌ ಅವರು ವಿ.ವಿ. ಅನುಮತಿ ಪಡೆದು ವಿಶ್ವವಿದ್ಯಾಲಯ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)