Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

SSLC-PUC ಪರೀಕ್ಷೆ: ವಿದ್ಯಾರ್ಥಿ, ಪೋಷಕರಲ್ಲಿ ಸಚಿವ ಸುರೇಶ್ ಕುಮಾರ್ ವಿಶೇಷ ಮನವಿ


 ಲಾಕ್ ಡೌನ್‌ ಅವಧಿ ಮುಗಿದ ಬಳಿಕ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳ ಹಿತ ಕಾಯುವ ತೀರ್ಮಾನವನ್ನು ನಾನೇ ಖುದ್ದಾಗಿ ಪ್ರಕಟಿಸುತ್ತೇನೆ. ಪೋಷಕರು, ವಿದ್ಯಾರ್ಥಿಗಳು‌ ಅನಗತ್ಯ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಧೈರ್ಯ ತುಂಬಿದರು.




ಪ್ರಧಾನಿ‌ ನರೇಂದ್ರ ಮೋದಿಯವರು ಕರೋನಾ ಲಾಕ್ ಡೌನ್ ಅವಧಿಯನ್ನು ಮೇ.03ರ ವರೆಗೆ ವಿಸ್ತರಿಸಿರುವ ಹಿನ್ನೆಲೆಯಲ್ಲಿ, ಎಸ್.ಎಸ್.ಎಲ್.ಸಿ ಪರೀಕ್ಷಾ ಅವಧಿಯನ್ನು ಸದ್ಯಕ್ಕೆ‌ ಪ್ರಕಟಿಸಲಾಗುವುದಿಲ್ಲ. ಜನ ಜೀವನ ಸಹಜ ಸ್ಥಿತಿಗೆ ಮರಳಿದ ಬಳಿಕ ಪರೀಕ್ಷೆಗಳ ದಿನಾಂಕವನ್ನು ಪ್ರಕಟಿಸುವೆ ಎಂದು ಸ್ಪಷ್ಟಪಡಿಸಿದರು. 
ಅಲ್ಲದೇ  ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ತರಗತಿಗಳನ್ನು ಪ್ರಾರಂಭಿಸಲಾಗಿದೆಯೆಂದು ಸುದ್ದಿ ಹರಿದಾಡುತ್ತಿದೆ. ಸಾರ್ವಜನಿಕ‌ ಶಿಕ್ಷಣ‌ ಇಲಾಖೆ‌ ಇಂತಹ ಯಾವುದೇ ಕ್ರಮವನ್ನು ಆರಂಭಿಸಿಲ್ಲ. ಪೋಷಕರು, ವಿದ್ಯಾರ್ಥಿಗಳು ಇಂತಹ ಮಾಹಿತಿಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಮನವಿ ಮಾಡಿದರು. ವಿದ್ಯಾರ್ಥಿಗಳಿಗೆ ಮನೆಯಲ್ಲೇ ಪಾಠ: ಕರ್ನಾಟಕ ಶಿಕ್ಷಣ ಇಲಾಖೆಯಿಂದ ವಿನೂತನ ಕಾರ್ಯ..!




ಲಾಕ್‌ಡೌನ್ ಜಾರಿ ಆಗಿದ್ದಾಗಿನಿಂದ ಸುರೇಶ್ ಕುಮಾರ್ ಅವರೇ ಖುದ್ದು ಫೇಸ್‌ಬುಕ್ ಲೈವ್‌ ಬಂದು ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಇಲಾಖೆಯ ಸಂಬಂಧಿಸಿದಂತೆ ಮಾಹಿತಿ ಕೊಡುತ್ತಲೇ ಇದ್ದಾರೆ

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)