Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಸರ್ಕಾರಿ ಉದ್ಯೋಗ ಪಡೆಯಲು ಪರೀಕ್ಷೆ ಗೆ ತಯಾರಿ ಮಾಡುವವರಿಗೆ ಪರೀಕ್ಷೆ ಸೂತ್ರಗಳು. |ಸರ್ಕಾರಿ ಉದ್ಯೋಗಗಳ ಮಾಹಿತಿ 2020

ಸರ್ಕಾರಿ ಉದ್ಯೋಗ ಪಡೆಯಲು ಪರೀಕ್ಷೆ ಗೆ ತಯಾರಿ ಮಾಡುವವರಿಗೆ ಪರೀಕ್ಷೆ ಸೂತ್ರಗಳು.  


ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸ್ ಮಾಡುವುದು ಹೇಗೆ ಅನ್ನೋದನ್ನ ಈ ಆರ್ಟಿಕಲ್ ನಲ್ಲಿ ನಾವು ಹೇಳಿಕೊಡುತ್ತೇವೆ. 
  ಸರ್ಕಾರಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಬಹಳ  ಶ್ರಮ ಮಾಡಬೇಕಾಗುತ್ತೆ ಅದಕ್ಕಾಗಿ ಗಂಟೆಗಳ ವಿಧ್ಯಾಭಾಸ ಮಾಡಬೇಕಾಗುತ್ತದೆ ಮತ್ತು ನಿರಂತರ ಪರಿಶ್ರಮದಿಂದ ಮಾತ್ರ ಸರ್ಕಾರಿ ಪರೀಕ್ಷೆಯನ್ನು ಪಾಸ್ ಮಾಡಲು ಸಾಧ್ಯ. 
ನಾವು ನಿಮಗೆ ಕೆಲವು ಸೂತ್ರಗಳನ್ನು ಹೇಳಿಕೊಡುತ್ತೇವೆ ಅದನ್ನು ಫಾಲೋ ಮಾಡಿ. 
 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಕೇವಲ ಗಂಟೆಗಳು ಓದುವುದು ಮಾತ್ರವಲ್ಲ, ಎಷ್ಟು ನಿಮಗೆ ನೆನಪಿರುತ್ತೆ ಅನ್ನೋದು ಬಹಳ ಮುಖ್ಯವಾಗಿರುತ್ತದೆ. 
 
  ಅಭ್ಯರ್ಥಿಗಳೇ ನೀವು ಒಂದು ದಿನದಲ್ಲಿ ಎಷ್ಟು ಓದುತ್ತೀರಿ ಅಂದ್ರೆ ಪರಿಮಾಣ ಮುಕ್ತವಾಗಿರುವುದಿಲ್ಲ ನೀವೆಷ್ಟು ಓದಿ ಅರ್ಥಮಾಡಿಕೊಂಡು ಅದನ್ನು ಬಹಳ ದಿನಗಳವರೆಗೆ ನೆನಪಿಟ್ಟುಕೊಳ್ಳಿ ಅಂದರೆ ಅರ್ಥಮಾಡಿಕೊಂಡು ನೆನಪಿಟ್ಟುಕೊಳ್ಳಿ ಅನ್ನೋದು ಮುಖ್ಯವಾಗಿರುವುದು. 

 ನಾವು ನಿಮಗೆ ಕೆಲವು ಸಲಹೆಗಳನ್ನು ಹೇಳುತ್ತೇವೆ ಫಾಲೋ ಮಾಡ್ರಿ. 
 ಉತ್ತಮ ಟೈಮ್ ಟೇಬಲ್ ಮತ್ತು ಓದುವ ತಂತ್ರಗಳನ್ನು ರೂಢಿಸಿಕೊಂಡು ಅದೇ ಸುತ್ತುಗಳನ್ನು ಕಾಪಾಡಿಕೊಂಡಲ್ಲಿ ಮುಂದೆ  ಹೇಗೆ ಓದಬೇಕು ಏನು ಮಾಡಬೇಕು ಎಂದು ತಿಳಿಯುತ್ತದೆ.

ದಿನನಿತ್ಯ ಸುದ್ದಿ ಪತ್ರಿಕೆಗಳನ್ನು ಓದುವುದನ್ನು ರೂಡಿಸಿಕೊಳ್ಳಿ ಈ ಮೂಲಕ ಇಂಗ್ಲೀಷ್,  ಕನ್ನಡ ಭಾಷೆ ಜ್ಞಾನ ಹೆಚ್ಚುತ್ತದೆ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಅರಿಯಬಹುದು. 

 ಯಾವ ಟಾಪಿಕ್,  ಸಬ್ಜೆಕ್ಟ್ ನಲ್ಲಿ ವೀಕ್ ಇರುತ್ತೀರೋ ಅದಕ್ಕೆ ಹೆಚ್ಚು ಸಮಯ ನೀಡಿರಿ. ಕೆಲವರು ಗಣಿತದಲ್ಲಿ ಇನ್ನು ಕೆಲವರು ಇಂಗ್ಲಿಷ್ನಲ್ಲಿ ವೀಕ್  ಇರುತ್ತಾರೆ ಅಂತ ವಿಷಯಗಳಿಗೆ ಹೆಚ್ಚಿನ ಸಮಯ ಕೊಡಿ. 

 ಯೂಟ್ಯೂಬ್ಟೆ, ಟೆಲಿಗ್ರಾಂ  ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಮೊಬೈಲ್ ಅಪ್ಲಿಕೇಶನ್ಗಳನ್ನು ಉಪಯೋಗಿಸಿ. 

 ದಿನ ಪತ್ರಿಕೆಗಳನ್ನು ಓದಲು ಕೊಂಡುಕೊಳ್ಳಲು ಸಾಧ್ಯವಾಗದೆ ಇದ್ದರೆ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡು ಬಹಳಷ್ಟು  ದಿನಪತ್ರಿಕೆಗಳನ್ನು ನೀವು ಓದಿಕೊಳ್ಳಬಹುದು ಅಥವಾ ಈ ಪೇಪರ್ ಗೂಗಲ್ ನಲ್ಲಿ ಸರ್ಚ್ ಮಾಡಿ ಸಹ ನೀವು ಓದಬಹುದು. 

  ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ತಪ್ಪದೆ ಬಿಡಿಸಬೇಕು ಇದರಿಂದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಾದರಿಗಳನ್ನು ತಿಳಿಯಬಹುದು.

ಉತ್ತಮ ಟೆಸ್ಟ್ ಸೀರೀಸ್ ಪುಸ್ತಕಗಳನ್ನು ಖರೀದಿಸಿ, ಅಣುಕು ಪರೀಕ್ಷೆಗಳನ್ನು ತೆಗೆದುಕೊಳ್ಳಿ, ಉತ್ತಮ ಅಭ್ಯಾಸ ಮಾಡಿ  ನಿಮ್ಮನ್ನು ಯಶಸ್ಸಿನ ಕಡೆಗೆ ಕರೆದೊಯ್ಯುತ್ತದೆ. 

ನಿಮ್ಮೆಲರಿಗೂ All the Best. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)