Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಜೂನ್ 1 ರ ಶೈಕ್ಷಣಿಕ ಸುದ್ದಿ |SSLC ಹಾಗೂ PUC ಪರೀಕ್ಷೆ ವೇಳಾಪಟ್ಟಿ ಯಂತೆ ನಡೆಯುತ್ತೆ |ಶಾಲಾ ಕಾಲೇಜುಗಳು ಹಾಗೂ ಕೋಚಿಂಗ್ ಕ್ಲಾಸೆಸ್ ಆರಂಭ ಯಾವಾಗ?

 ಜೂನ್ 1 ರ ಶೈಕ್ಷಣಿಕ ಸುದ್ದಿ |SSLC ಹಾಗೂ PUC ಪರೀಕ್ಷೆ ವೇಳಾಪಟ್ಟಿ ಯಂತೆ ನಡೆಯುತ್ತೆ |ಶಾಲಾ ಕಾಲೇಜುಗಳು ಹಾಗೂ ಕೋಚಿಂಗ್ ಕ್ಲಾಸೆಸ್ ಆರಂಭ ಯಾವಾಗ? 


ಕೇಂದ್ರ ಸರ್ಕಾರ ಜೂನ್ ಅಂತ್ಯದ ವರೆಗೆ ಶಾಲಾ-ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಲು ಅನುಮತಿ ನೀಡದೇ ಇರುವುದರಿಂದ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಶೈಕ್ಷಣಿಕ ಚಟುವಟಿಕೆ ನಡೆಸಬಹುದಾದ ಸಾಧ್ಯತೆಗಳ ಬಗ್ಗೆ ಚರ್ಚೆ ಆರಂಭವಾಗಿದೆ.




 ವಿಶ್ವವಿದ್ಯಾಲಯ ಹಾಗೂ ಪದವಿ ಕಾಲೇಜುಗಳಲ್ಲಿ ಆನ್ಲೈನ್ ತರಗತಿ ನಡೆಸಲಾಗುತ್ತಿದೆ ಮೇ ಅಂತ್ಯದವರೆಗೆ ಮುಗಿಸುವ ಸೂಚನೆಯನ್ನು ಉನ್ನತ ಶಿಕ್ಷಣ ಇಲಾಖೆಯಿಂದ ನೀಡಲಾಗಿತ್ತು ಆದರೆ ಅನೇಕ ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ಪಠ್ಯಕ್ರಮ ಪೂರ್ಣಗೊಂಡಿಲ್ಲ ವಿಶ್ವವಿದ್ಯಾಲಯ ತಾಂತ್ರಿಕ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ತರಗತಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಉನ್ನತ ಶಿಕ್ಷಣ ಇಲಾಖೆಯ ನಿರ್ಧಾರವನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

ಶಾಲೆಗಳನ್ನು ಆರಂಭಿಸಿದರು ಪಾಲಕ ಪೋಷಕರು ತಮ್ಮ ಮಕ್ಕಳ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಕಾಲೇಜುಗಳನ್ನು ಹೇಗೆ ಆರಂಭಿಸಬೇಕು ಎಂಬುದರ ಬಗ್ಗೆ ಸಾರ್ವಜನಿಕ ಶಿಕ್ಷಣ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. 
ಜುಲೈ ಮೊದಲ ವಾರದಲ್ಲಿ ಶಾಲೆಗಳನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ ಆದರೆ SSLC ಪರೀಕ್ಷೆ ಜುಲೈ 5ರ ವರೆಗೆ  ನಡೆಯುವುದರಿಂದ ಶೈಕ್ಷಣಿಕ ವರ್ಷ ಆರಂಭ ಸ್ವಲ್ಪ ವಿಳಂಬವಾಗಬಹುದು ಅಲ್ಲದೆ ಕೆಲ ಜಿಲ್ಲೆಗಳಲ್ಲಿ ಹಳ್ಳಿ ಪ್ರದೇಶವನ್ನು ಸೀಲಡೌನ್  ಮಾಡಿರುವುದರಿಂದ ಶಾಲೆ ಆರಂಭಿಸುವುದರ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟತೆಗೆ ಬರಲು ಸಾಧ್ಯವಾಗುತ್ತಿಲ್ಲ. 
ಮಾನವ ಸಂಪನ್ಮೂಲ ಸಚಿವಾಲಯದ ಮಾರ್ಗಸೂಚಿಯನ್ನು ಪಾಲಿಸಬೇಕಾಗಿದೆ ಹೀಗಾಗಿ ಶಾಲೆ ಆರಂಭದ ಬಗ್ಗೆ ಜುಲೈ ಎರಡು ಅಥವಾ ಮೂರನೇ ವಾರದಲ್ಲಿ ಸಿಗಲಿದೆ ಎಂದು ಮೂಲಗಳು ತಿಳಿಸಿವೆ. 


ಕಂಟೈನ್ಮೆಂಟ್ ಪ್ರದೇಶದ ಮಕ್ಕಳಿಗೆ ಜುಲೈ ನಲ್ಲಿ ಪರೀಕ್ಷೆ 




  ಕಲುಷಿತ ಪ್ರದೇಶದ ಮಕ್ಕಳಿಗೆ ಜುಲೈನಲ್ಲಿ ಪರೀಕ್ಷೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಬೇಕಾಗಿರುವ ವಲಸೆ ಕಾರ್ಮಿಕರ ಮಕ್ಕಳು ಈಗ ಇರುವ ಮೂರು  ಜಿಲ್ಲೆಗಳಿಂದಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. 

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅನೇಕ ಹಾಸ್ಟೆಲ್ಗಳನ್ನು ಕ್ವಾರಂಟೈನ್  ಕೇಂದ್ರಗಳನ್ನಾಗಿ ಬಳಕೆ ಮಾಡಿಕೊಂಡಿರುವುದರಿಂದ ಮಕ್ಕಳಿಗೆ ಸಮಸ್ಯೆ ಆಗುತ್ತದೆ ಈ ಕಾರಣಕ್ಕೆ ಅವರ ಊರುಗಳಲ್ಲಿರುವ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲು ಅನುಕೂಲ ಆಗುವಂತೆ ಹಾಲ್ ಟಿಕೆಟ್ ನೀಡಲಾಗುತ್ತೆ    ಎಂದರು.

 ಪರೀಕ್ಷಾ ಕೇಂದ್ರಗಳು ಕಂಟೈನ್ಮೆಂಟ್  ಪ್ರದೇಶದ ವ್ಯಾಪ್ತಿಗೆ ಸೇರಿದರೆ, ಆ ಪ್ರದೇಶದ  ಮಕ್ಕಳಿಗೆ ಜುಲೈನಲ್ಲಿ ನಡೆಯುವ ಪೂರಕ ಪರೀಕ್ಷೆ ಸಂದರ್ಭದಲ್ಲಿ ಅವಕಾಶ ಕಲ್ಪಿಸಲಾಗುವುದು ಒಂದು ವೇಳೆ ವಿದ್ಯಾರ್ಥಿ ಇರುವ ಪ್ರದೇಶದ ಕಂಟೋನ್ಮೆಂಟ್ ಆದರೆ ಅವರಿಗೆ ಜುಲೈನಲ್ಲಿ ಅವಕಾಶ ಸಿಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ಸುರಕ್ಷತೆ ಮತ್ತು ಆತ್ಮವಿಶ್ವಾಸಕ್ಕೆ ಮೊದಲು ಆದ್ಯತೆ. 

ಸಂಕಷ್ಟದ ನಡುವೆಯೂ ಪರೀಕ್ಷೆ ಬರೆಯುವ ಮಕ್ಕಳ ಸುರಕ್ಷತೆ ಹಾಗೂ ಆತ್ಮವಿಶ್ವಾಸಕ್ಕೆ ಮೊದಲು ಆದ್ಯತೆ ನೀಡಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಕುಡಿಯಲು ಮನೆಯಿಂದಲೇ ಬಿಸಿನೀರನ್ನು ತರುವಂತೆ ಸೂಚಿಸಬೇಕು ಜೊತೆಗೆ ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು.
ಪರೀಕ್ಷಾ  ಕೇಂದ್ರಗಳಲ್ಲಿ ಶೌಚಾಲಯ ಸ್ವಚ್ಛತೆಯ ಬಗ್ಗೆ ಗಮನಹರಿಸಬೇಕು ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ಮನಸ್ಥಿತಿ ಕೆಡದಂತೆ ಎಚ್ಚರ ವಹಿಸಬೇಕು ಎಂದರು. 

ಪರೀಕ್ಷಾ ಕೇಂದ್ರದಿಂದ ಮನೆಯ ದೂರವಿದ್ದು ಯಾವುದೇ ಸಂಚಾರ ವ್ಯವಸ್ಥೆ ಇಲ್ಲದಿದ್ದರೆ ಅಂತ ವ್ಯವಸ್ಥೆ ಇಲ್ಲದಿದ್ದರೆ ಅಂತಹ ವಿದ್ಯಾರ್ಥಿಗಳ ವಿವರ ಪಡೆದು ಶಾಲೆಯ ಮುಖ್ಯ ಉಪಾಧ್ಯಾಯರು ರೂಟ್ ಮ್ಯಾಪ್ ಸಿದ್ಧಪಡಿಸಬೇಕು ಅವರ ಬಳಿ ಇರುವ ಪ್ರವೇಶ  ಪ್ರದೇಶ ಪತ್ರವನ್ನು, ಉಚಿತ ಬಸ್ ಪಾಸ್ ಗಳೆಂದು ಎಂದು ಪರಿಗಣಿಸಲು ನಿರ್ಧರಿಸಲಾಗಿದೆ. 

 ಜುಲೈವರೆಗೆ ಶಾಲೆ-ಕಾಲೇಜು ಓಪನ್ ಆಗಲ್ಲ

 ರಾಜ್ಯದಲ್ಲಿ ಜುಲೈವರೆಗೆ ಶಾಲೆ-ಕಾಲೇಜು ತರಲು ಸರ್ಕಾರ ತೀರ್ಮಾನಿಸಿದೆ ಶಾಲೆ-ಕಾಲೇಜು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರಗಳನ್ನು ಅಂತ್ಯದವರೆಗೆ ತೆರೆಯುವಂತಿಲ್ಲ ಎಂದು ಭಾನುವಾರ ಬಿಡುಗಡೆ ಮಾಡಿದ ಮಾರ್ಗದರ್ಶಿ ಸೂತ್ರಗಳಲ್ಲಿ ಸ್ಪಷ್ಟಪಡಿಸಲಾಗಿದೆ.
 ಇವುಗಳನ್ನು ಜುಲೈನಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ 

ಪಿಯುಸಿ ಹಾಗೂ SSLC ಪರೀಕ್ಷೆಗಳು ನಿಗದಿತ ದಿನಾಂಕದಂದು ನಡೆಯಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಲೊಕ್ಡೌನ್ ಸಡಲಿಕೆ ಬಗ್ಗೆ ಕೇಂದ್ರ ಮಾರ್ಗಸೂಚಿ ಹೊರಡಿಸಿದ ಬೆನ್ನಲ್ಲೇ ರಾಜ್ಯ ಸರ್ಕಾರ ಪ್ರಕಟಿಸಿದ ನಿಯಮಾವಳಿಗಳಲ್ಲಿ ಕೇಂದ್ರದ ನಿಯಮಗಳನ್ನು ಬಹುತೇಕ ಪಾಲಿಸಲಾಗಿದೆ.
ಜೂನ್  1ರಿಂದ  ದೇಗುಲ ಮಸೀದಿಗಳನ್ನು ತೆರೆಯುವುದಕೆ  ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಮನವಿ ಮಾಡಿತ್ತು, ಜೂನ್ 8 ರಿಂದ ದೇಗುಲ, ಚರ್ಚ್, ಮಸೀದಿಗಳನ್ನು, ಹೋಟೆಲ್ತೆ, ಮಾಲ್ ತೆರೆಯುವುದಕ್ಕೆ  ಕೇಂದ್ರ ಸರ್ಕಾರ್ ಸೂಚಿಸಿದೆ ಹಾಗಾಗಿ ರಾಜ್ಯ ಸರ್ಕಾರ್ ಇದನ್ನು ಪಾಲಿಸಲು ನಿರ್ಧರಿಸಲಾಗಿದೆ . 
ಇಂದೇ ಕಾಲ್ ಮಾಡಿ
ಎಲ್ಲಾ ಸಮಸ್ಯೆಗಳಿಗೆ ಪರಿಹಾರ, ಇಂದೇ ಕಾಲ್ ಮಾಡಿ. 

  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)