Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಪಠ್ಯ ಪುಸ್ತಕಗಳನ್ನು ಮಕ್ಕಳ ಮನೆಗೆ ರವಾನಿಸಲು ಚಿಂತನೆ. ಜಿಲ್ಲೆಗಳಿಗೆ ಶೇಕಡ 70% ಪುಸ್ತಕಗಳ ಸರಬರಾಜು.

ಪಠ್ಯ ಪುಸ್ತಕಗಳನ್ನು ಮಕ್ಕಳ ಮನೆಗೆ ರವಾನಿಸಲು ಚಿಂತನೆ. 
ಜಿಲ್ಲೆಗಳಿಗೆ ಶೇಕಡ 70% ಪುಸ್ತಕಗಳ ಸರಬರಾಜು. 

              ಚಿತ್ರ : ಪ್ರಗತಿವಾಣಿ ಕೃಪೆ. 

  ಶಾಲೆಗಳು ಯಾವಾಗ ಆರಂಭವಾಗಬೇಕು ಅನ್ನೋದು ಇದುವರೆಗೂ ನಿರ್ಧಾರವಾಗದೇ  ಇರುವ ಕಾರಣದಿಂದಾಗಿ ಕರ್ನಾಟಕ ಶಿಕ್ಷಣ ಇಲಾಖೆಗೆ ಪಠ್ಯಪುಸ್ತಕ ವಿತರಣೆ ಯಾವಾಗ ಮಾಡಬೇಕು ಅನ್ನೋದು ತಲೆನೋವಾಗಿದೆ. 
 ಕೋವಿಡ್ ನೈನ್ಟೀನ್ ಕಾರಣದಿಂದಾಗಿ ಈ ವರ್ಷ ಶಾಲೆಗಳಿಗೆ ಪಠ್ಯಪುಸ್ತಕಗಳು ತಡವಾಗಿ ರವಾನೆಯಾಗಿದೆ ಇಲ್ಲದಿದ್ದರೆ ಸರ್ಕಾರದಿಂದ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತದೆ. 

 ಕೊರೋನಾ  ಸೋಂಕಿನ ಪರಿಣಾಮದಿಂದಾಗಿ ಈಗಾಗಲೇ ಶೇಕಡ 70ರಷ್ಟು ಪಠ್ಯಪುಸ್ತಕಗಳು ತಡವಾಗಿ ರವಾನೆಯಾಗಿದ್ದು, 2 ತಿಂಗಳು ತಡವಾಗಿ ಪಠ್ಯಪುಸ್ತಕಗಳು ಬಂದಿದೆ.  
ಪ್ರತಿ ವರ್ಷ ಜೂನ್ ತಿಂಗಳ ಮುಗಿಯುವರೆಗೆ ಸರ್ಕಾರದಿಂದ ಪಠ್ಯಪುಸ್ತಕಗಳು ವಿತರಣೆ ಮಾಡಲಾಗುತ್ತಿತ್ತು. 

 ಜಾಹಿರಾತು :


 ಕೊರೋನಾ  ಸೋಂಕಿನ ಹಾವಳಿಯಿಂದಾಗಿ ಕರ್ನಾಟಕ ಸರ್ಕಾರಕ್ಕೆ ಶಾಲಾ-ಕಾಲೇಜುಗಳನ್ನು ಯಾವಾಗ ಆರಂಭ ಮಾಡಬೇಕು ಅನ್ನೋದು ಇದುವರೆಗೂ ನಿರ್ಧಾರ ತೆಗೆದುಕೊಳ್ಳುವುದು ಕಷ್ಟ ವಾಗುತ್ತಾ ಇದೆ. 
ಸೆಪ್ಟೆಂಬರ್ ಕೊನೆವರಿಗೆ  ಆರಂಭವಾಗುವ ಸಾಧ್ಯತೆ ಕಡಿಮೆ ಇರುವ ಕಾರಣದಿಂದಾಗಿ ಅಲ್ಲಿಯವರೆಗೆ ಮನೆಯಲ್ಲಿ ಮಕ್ಕಳು ಓದಿಕೊಳ್ಳಲು ಅನುಕೂಲ ಮಾಡಿಕೊಳ್ಳಲು ಸರ್ಕಾರ ಮಕ್ಕಳ ಮನೆಗೆ ಪುಸ್ತಕಗಳನ್ನು ರವಾನಿಸುವಂತೆ ಚಿಂತನೆ ನಡೆಸಲಾಗುತ್ತಿದೆ. 
  ಖಾಸಗಿ ಶಾಲೆಗಳು ಹಣ ಪಾವತಿಸಿದ ಕಾರಣದಿಂದಾಗಿ ಪುಸ್ತಕಗಳನ್ನು ಬಹುತೇಕ ರವಾನಿಸಲಾಗಿದೆ.   ಸರ್ಕಾರಿ ಶಾಲೆಗಳಿಗೆ ರವಾನೆ  ಆರಂಭವಾಗಿಲ್ಲ ಬಹು ಬೇಗನೆ ಆರಂಭವಾಗುತ್ತೆ ಅಂತ ಶಿಕ್ಷಣ ಅಧಿಕಾರಿಗಳು ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)