Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

SSLC ಉತ್ತರ ಪತ್ರಿಕೆ ಬದಲು, ವರದಿ ನೀಡಲು ಶಿಕ್ಷಣ ಸಚಿವ ಸೂಚನೆ.

SSLC ಉತ್ತರ ಪತ್ರಿಕೆ ಬದಲು, ವರದಿ ನೀಡಲು ಶಿಕ್ಷಣ ಸಚಿವ ಸೂಚನೆ.


ಬೆಂಗಳೂರು;

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ತರೀಪುರ ಗ್ರಾಮದ ವಿನಾಯಕ ಪ್ರೌಢಶಾಲೆಯ SSLC  ವಿದ್ಯಾರ್ಥಿನಿಯಾದ್  ಅಶ್ವಿನಿ ಅವರ ಉತ್ತರಪತ್ರಿಕೆಗಳು  ಬದಲಾದ ಪ್ರಕರಣ ಕಂಡುಬಂದಿದೆ. ಈ ಘಟನೆ ಬಗ್ಗೆ ಗಂಭೀರವಾಗಿ ಪರಿಗಣನೆ ಮಾಡುವಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ್ ಎಸ್‌.ಸುರೇಶ್‌ಕುಮಾರ್‌, ಅವರು ಈ ಕುರಿತು ತಕ್ಷಣ ಪರಿಶೀಲಿಸಲು ವರದಿ ನೀಡುವಂತೆ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.



ಈ ಬಾರಿ ಪರೀಕ್ಷೆಯ ಇಂಗ್ಲಿಷ್‌ ವಿಷಯದಲ್ಲಿ 89 ಅಂಕಗಳನ್ನು ಪಡೆದಿರು ವಅಶ್ವಿನಿಗೆ, ಕನ್ನಡದಲ್ಲಿ 125ಕ್ಕೆ ಬರಿ 4 ಅಂಕ  ಬಂದಿವೆ. ಸಮಾಜವಿಜ್ಞಾನದಲ್ಲಿ 7, ಹಿಂದಿ 33, ಗಣಿತ 48 ಮತ್ತು ವಿಜ್ಞಾನದಲ್ಲಿ 51 ಅಂಕಗಳಿದ್ದು,ಪ್ರತಿಭಾವಂತೆ ಎನಿಸಿಕೊಂಡಿದ್ದ ವಿದ್ಯಾರ್ಥಿನಿಗೆ ತೀರಾ ಕಡಿಮೆ ಅಂಕಗಳು ಬಂದಿದ್ದರಿಂದ ಅನುಮಾನಗೊಂಡು ಉತ್ತರ ಪತ್ರಿಕೆಗಳ ನಕಲು ಪ್ರತಿ ನೋಡಿದಾಗ ಉತ್ತರ ಪತ್ರಿಕೆಯ ಹಾಳೆಗಳು ಬದಲಾಗಿರುವುದು ಕಂಡುಬಂದಿದೆ.


ತಾಯಿ ಹಾಗೂ ಮಾವನ ಜತೆ ಬೆಂಗಳೂರಿಗೆ ತೆರಳಿ ದೂರು ನೀಡಿರುವ ಅವರು,"ಕನ್ನಡ, ವಿಜ್ಞಾನ ಹಾಗೂ ಹಿಂದಿ ವಿಷಯಗಳ ಉತ್ತರ ಪತ್ರಿಕೆಗಳಲ್ಲಿ, ಮೊದಲ ಪುಟ ಹೊರತು ಪಡಿಸಿ ಎಲ್ಲ ಹಾಳೆಗಳನ್ನು ಬದಲಿಸಲಾಗಿದೆ. ನನ್ನ ಸರಿಯಾದ್ ಉತ್ತರ ಪತ್ರಿಕೆ ಕೊಡಿಸಬೇಕು, ಅವುಗಳ ಮೌಲ್ಯ ಮಾಪನಮಾಡಿಸಿ ಫಲಿತಾಂಶ ಪ್ರಕಟಿಸಬೇಕು ಎಂದು

ಕೇಳಿಕೊಂಡಿದ್ದಾರೆ.


ಅಶ್ವಿನಿ ಪರೀಕ್ಷೆ ಬರೆದಿರುವ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಮತ್ತು ಅವರ ಉತ್ತರ ಪತ್ರಿಕೆಗಳ

ಮೌಲ್ಯಮಾಪನ ಮಾಡಿದವರನ್ನು ವಿಚಾರಣೆಗೆ ಒಳಪಡಿಸಲಾಗುವುದು.ಇನ್ನು ಎರಡು ಮೂರು ದಿನಗಳಲ್ಲಿ ಸತ್ಯಾಂಶ ತಿಳಿಯಲಿದೆ ಎಂದು ವಿದ್ಯಾರ್ಥಿನಿಗೆ ನ್ಯಾಯ ಕೊಡಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟಿದ್ದಾರೆ ಎಂದು ಅಶ್ವಿನಿ ಅವರ ಮಾವ ಸೋಮು ಅವರು ಹೇಳಿದ್ದಾರೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)