Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

Karnataka PUC 2nd year final time table released by PUC Board 2021-22|ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ

Karnataka PUC 2nd year final time table released by PUC Board 2021-22|ದ್ವಿತೀಯ ಪಿಯುಸಿ ಅಂತಿಮ ವೇಳಾಪಟ್ಟಿ



ಅಂತಿಮ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾಗಿದ್ದು ಡೌನ್ಲೋಡ್ ಮಾಡಿಕೊಳ್ಳಿ.






2021-22ನೇ ಸಾಲಿನ ದ್ವಿತೀಯ ಪಿಯುಸಿ ಮುಖ್ಯ ಪರೀಕ್ಷೆಯ (PUC Exmas) ಅಂತಿಮ ವೇಳಾಪಟ್ಟಿ(2nd PUC Final Time Table) ಪ್ರಕಟವಾಗಿದೆ.

ಇಂದು(ಸೋಮವಾರ) ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಏಪ್ರಿಲ್ 22ರಿಂದ ಮೇ 18ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ.
ಜೆಇಇ ಪರೀಕ್ಷೆಯಂದೇ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ( Karnataka Second PU Exam ) ದಿನಾಂಕ ಘೋಷಣೆಯಿಂದಾಗಿ, ಮತ್ತೆ ಪಿಯು ಬೋರ್ಡ್ ನಿಂದ ವಾರ್ಷಿಕ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿ, ತಾತ್ಕಾಲಿಕ ವಾರ್ಷಿಕ ವೇಳಾಪಟ್ಟಿ ಪ್ರಕಟಿಸಲಾಗಿತ್ತು.

ಈ ಹಿಂದೆ ಏಪ್ರಿಲ್ 16 ರಿಂದ ಮೇ 6ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯಲಿರುವ ಬಗ್ಗೆ ಪದವಿಪೂರ್ವ ಶಿಕ್ಷಣ ಮಂಡಳಿ ಘೋಷಣೆ ಮಾಡಿತ್ತು. ಆದ್ರೆ ದ್ವಿತೀಯ PU ಪರೀಕ್ಷೆ ಸಂದರ್ಭದಲ್ಲಿ JEE ಮುಖ್ಯ ಪರೀಕ್ಷೆ ಹಿನ್ನೆಲೆಯಲ್ಲಿ ಇದೀಗ ಆಕ್ಷೇಪಣೆಗಳನ್ನು ಸರಿ ಪಡಿಸಿದ ಬಳಿಕ, ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದೆ.

2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ದಿನಾಂಕ 22-04-2022ರಿಂದ 11-05-2022ರವರೆಗೆ ನಿಗದಿಪಡಿಸಲಾಗಿದ್ದು, ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 05-03-2022ರ ಸಂಜೆ 5 ಗಂಟೆಯವರೆಗೆ ಸಮಯ ನೀಡಲಾಗಿತ್ತು. ಸದ್ಯ ಯಾವುದೇ ಅಕ್ಷೇಪಣೆಗಳಿಲ್ಲದ ಕಾರಣ ದ್ವಿತೀಯ ಪಿಯು ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಅಂತಿಮ ಮಾಡಿ ಪ್ರಕಟ ಮಾಡಲಾಗಿದೆ.

ಇದು ಅಂತಿಮ ವೇಳಾಪಟ್ಟಿಯಾಗಿದ್ದು, ಇನ್ನೂ ಮುಂದೆ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ ಎಂದು ಪಿಯು ಬೋರ್ಡ್ ತಿಳಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಹೀಗಿದೆ
ಏಪ್ರಿಲ್ 22ರಂದು ವ್ಯವಹಾರ ಅಧ್ಯಯನ ಪರೀಕ್ಷೆ
ಏಪ್ರಿಲ್ 23ರಂದು ಗಣಿತ ಪರೀಕ್ಷೆ, ಏಪ್ರಿಲ್ 25ರಂದು ಅರ್ಥಶಾಸ್ತ್ರ
ಏಪ್ರಿಲ್ 26ರಂದು ಮನಃಶಾಸ್ತ್ರ, ರಾಸಾಯನ ಶಾಸ್ತ್ರ ಪರೀಕ್ಷೆ
ಏಪ್ರಿಲ್ 27ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ
ಏಪ್ರಿಲ್ 27ರಂದು ಉರ್ದು, ಸಂಸ್ಕೃತ, ಫ್ರೆಂಚ್
ಏಪ್ರಿಲ್ 28ರಂದು ಕನ್ನಡ, ಅರೇಬಿಕ್ ಭಾಷಾ ಪರೀಕ್ಷೆ
ಮೇ 2ರಂದು ಭೂಗೋಳ ಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆ
ಮೇ 5ರಂದು ಇಂಗ್ಲಿಷ್ ಭಾಷಾ ಪರೀಕ್ಷೆ
ಮೇ 10ರಂದು ಇತಿಹಾಸ, ಭೌತಶಾಸ್ತ್ರ ಪರೀಕ್ಷೆ
ಮೇ 12ರಂದು ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ ಪರೀಕ್ಷೆ
ಮೇ 14ರಂದು ಸಮಾಜಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮೇ 17ರಂದು ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ
ಮೇ 18ರಂದು ಹಿಂದಿ ಪರೀಕ್ಷೆ


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)