Featured Post

KCET 2024 Physics Keyanswer | Karnataka cet 2024 Keyanswer

ಇಮೇಜ್
KCET 2024 Physics Keyanswer | Karnataka cet 2024 Keyanswer  To download PDF  click here to download

ಇದು ಪಾಸ್ ಆಗಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ಮಾತ್ರ!SSLC ವಿದ್ಯಾರ್ಥಿಗಳಿಗೆ ತಪ್ಪದೇ ತಿಳಿದುಕೊಳ್ಳಿ.

ಇದು ಪಾಸ್ ಆಗಲು ಕಷ್ಟ ಪಡುವ ವಿದ್ಯಾರ್ಥಿಗಳಿಗೆ ಮಾತ್ರ!
1. ನಿಮ್ಮ ಅಧ್ಯಾಪಕರ ಮಾರ್ಗದರ್ಶನ ಪಡೆದು ಪ್ರತೀ ವಿಷಯದಲ್ಲಿ 45 ಅಂಕದ ಪಾಸಿಂಗ್ ಪ್ಯಾಕೇಜ್ ಪ್ರಶ್ನೆಗಳನ್ನು ಪಟ್ಟಿ ಮಾಡಿ. ಅವುಗಳ ಮೇಲೆ ಹೆಚ್ಚು ಫೋಕಸ್ ಮಾಡಿ ಓದಿ.

2. ಇನ್ನು ಪಾಠ 1, ಪಾಠ 2....ಹೀಗೆ ಓದುವುದನ್ನು ಬಿಟ್ಟು ಪ್ರಶ್ನೆಪತ್ರಿಕೆಗಳನ್ನು ಸ್ವತಂತ್ರವಾಗಿ ಬಿಡಿಸುವುದು ಸೂಕ್ತ. ಬಿಡಿಸಿದ ನಂತರ ಅವುಗಳನ್ನು ನಿಮ್ಮ ಶಿಕ್ಷಕರಿಂದ ಮೌಲ್ಯಮಾಪನವನ್ನು ಮಾಡಿಸಿಕೊಂಡರೆ ಇನ್ನೂ ಒಳ್ಳೆಯದು.

3. ವಿವಿಧ ವಿಷಯಗಳ ಪರಿಣತ ಅಧ್ಯಾಪಕರು ನಡೆಸಿಕೊಡುವ ರೇಡಿಯೋ ಮತ್ತು ಟಿವಿ ಕಾರ್ಯಕ್ರಮಗಳು ತುಂಬಾ ಚೆನ್ನಾಗಿವೆ. ಅವುಗಳನ್ನು ಆಲಿಸಿ.

4. ಭಾಷಾ ವಿಷಯಗಳಲ್ಲಿ ವ್ಯಾಕರಣ (ಗ್ರಾಮರ್) ವಿಭಾಗವು ನಿಮಗೆ ಹೆಚ್ಚು ಗೊಂದಲವನ್ನು ಉಂಟುಮಾಡುವ ವಿಭಾಗ. ಅದಕ್ಕೆ ಪೂರಕವಾದ ಎರಡು ಅಥವ ಮೂರು ಗಂಟೆಗಳ ಒಂದು ತರಗತಿಯು ನಿಮಗೆ ಈಗ ಖಂಡಿತ ಅಗತ್ಯ ಇದೆ. ನಿಮ್ಮ ಅಧ್ಯಾಪಕರನ್ನು ಈ ಬಗ್ಗೆ ವಿನಂತಿ ಮಾಡಿ.

. ಹಾಗೆಯೇ ಭಾಷಾ ವಿಷಯಗಳಲ್ಲಿ ಪದ್ಯ ಬಾಯಿಪಾಠ, ಸಾರಾಂಶ ಬರೆಯುವುದು, ಪತ್ರ ಲೇಖನ, ಪ್ರಬಂಧ ರಚನೆ, ಸಂದರ್ಭ ಸಹಿತ ಅರ್ಥ ವಿವರಣೆ, ಕವಿ ಕಾವ್ಯ ಪರಿಚಯ, ಗಾದೆ ವಿಸ್ತಾರ ಇವುಗಳು ಹೆಚ್ಚು ಸುಲಭ ಆದವು. ಈ ಅಂಕಗಳನ್ನು ಮಿಸ್ ಮಾಡಿಕೊಳ್ಳಬೇಡಿ. ಅವುಗಳನ್ನು ಈಗಲೂ ನೀವು ಕಲಿಯಬಹುದು.

6. ಪರೀಕ್ಷಾ ಕೇಂದ್ರದಲ್ಲಿ ಮೂರುಕಾಲು ಘಂಟೆ ಕುಳಿತುಕೊಳ್ಳುವುದು ಬಹಳ ದೊಡ್ಡ ತಪಸ್ಸು. ಅದಕ್ಕೆ ಬೆಟ್ಟದಷ್ಟು ತಾಳ್ಮೆ ಬೇಕು. ಅದನ್ನು ಹೆಚ್ಚು ಮಾಡಲು ಮಾನಸಿಕವಾಗಿ ಸಿದ್ಧತೆ ಮಾಡಿ.

7. ನೀವೀಗ ದಿನಕ್ಕೆ ಕನಿಷ್ಠ ಒಂದೆರಡು ಗಂಟೆಗಳ ಕಾಲ ಬರೆಯುವುದನ್ನು ಅಭ್ಯಾಸ ಮಾಡಬೇಕು. ಇದರಿಂದ ಅಕ್ಷರ ಚಂದ ಆಗುತ್ತದೆ ಮತ್ತು ನಿಮ್ಮ ಸೈಕೊಮೋಟಾರ್ ಕೌಶಲವು ವೃದ್ಧಿ ಆಗುತ್ತದೆ ಮತ್ತು ನೆನಪಿನ ಶಕ್ತಿಯು ಜಾಸ್ತಿಯಾಗುತ್ತದೆ.

8. ಮೌನವು ಅತೀ ಹೆಚ್ಚು ಪ್ರಭಾವಶಾಲೀ ಮಾಧ್ಯಮ. ಪರೀಕ್ಷೆ ಸಮೀಪ ಬರುತ್ತಿದ್ದ ಹಾಗೆ ಹೆಚ್ಚು ಹೊತ್ತು ಮೌನ ಆಗಿರಿ. ಮೌನ ಪ್ರಾರ್ಥನೆಗಳು ಹೆಚ್ಚು ಶಕ್ತಿಶಾಲಿ.

9. ಬೆಳಗ್ಗೆ ಎದ್ದು ಸ್ವಲ್ಪ ಹೊತ್ತು Instrumental Music (ಸಿತಾರ್, ವೀಣೆ ಇತ್ಯಾದಿ) ಕೇಳುವುದು ನಿಮ್ಮ ಏಕಾಗ್ರತೆ ಹೆಚ್ಚು ಮಾಡಲು ಉತ್ತಮ ಅಭ್ಯಾಸ. ಏಕೆಂದರೆ ಸಂಗೀತಕ್ಕೆ ನಿಮ್ಮ ಮೆಮೊರಿ ಮತ್ತು ಏಕಾಗ್ರತೆ ಎರಡನ್ನೂ ಹೆಚ್ಚು ಮಾಡುವ ಶಕ್ತಿ ಇದೆ. ಮನಸ್ಸು ರಿಲ್ಯಾಕ್ಸ್ ಮಾಡಲು ಕೂಡ ಮ್ಯೂಸಿಕ್ ಹೆಚ್ಚು ಅನುಕೂಲಕರ.

10. ನಿಮ್ಮ ಮೇಲೆ ಬೇರೆ ಯಾರಾದರೂ ಭರವಸೆಯನ್ನು ಇಡುವುದಕ್ಕಿಂತ ನಿಮ್ಮ ಮೇಲೆ ನೀವೇ ಹೆಚ್ಚು ಭರವಸೆ ಇಡುವುದು ಮುಖ್ಯ. ಅದು ಪಾಸಿಟಿವ್ ಥಿಂಕಿಂಗ್ ಮಾಡುವುದರಿಂದ ಸಾಧ್ಯ ಆಗುತ್ತದೆ. ‘ನನಗೆ ಖಂಡಿತ ಸಾಧ್ಯ ಇದೆ’ ಅನ್ನುವುದೇ ನಿಮ್ಮ ಯಶಸ್ಸಿನ ಬೀಜ ಮಂತ್ರ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

Chemistry PUC II year Practical Viva questions ( Most important)